ಬೈಲೂರು ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ

ಕಾರ್ಕಳ: ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಿತವಾಗಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿರುವ ಪರಶುರಾಮ ಪ್ರತಿಮೆಯನ್ನು ಪುನರ್ ಸ್ಥಾಪಿಸುವ ಹಿನ್ನೆಲೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ಮಾ. 18ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. ಸಮಿತಿಯ ಗೌರವಾಧ್ಯಕ್ಷರಾಗಿ ಕೆ. ಕೃಷ್ಣಮೂರ್ತಿ ಆಚಾರ್ಯ ಹಾಗೂ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಬಜಗೋಳಿ ಆಯ್ಕೆಯಾಗಿದ್ದಾರೆ.

ಮಾ. 25ರಂದು ಉಡುಪಿಯ ಮಥುರಾ ಹೋಟೆಲಿನಲ್ಲಿ ಸಮಿತಿಯ ಮೊದಲ ಸಭೆ ನಡೆಯಿತು. ಈ ಸಂದರ್ಭ ಸಮಿತಿಯ ಸಲಹೆಗಾರರಾದ ವಿಶ್ವಾಸ್ ವಿ. ಅಮೀನ್, ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ ನಲ್ಲೂರು, ನಿತಿನ್ ಪೂಜಾರಿ ಬೆಳುವಾಯಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಲಾಲ್ ಕಾಂತಾವರ, ಜತೆ ಕಾರ್ಯದರ್ಶಿ ಸಂತೋಷ್‌ ಬೋಳ, ಜೊತೆ ಕೋಶಾಧಿಕಾರಿ ಶಶಿಧರ ಹವಾಲ್ದಾರ್ ಬೆಟ್ಟು ಹಾಗೂ ಸಮಿತಿಯ ಸದಸ್ಯರಾದ ನವೀನ್ ಸಾಲಿಯಾನ್ ಪೆರ್ಡೂರು, ವಿಘ್ನೇಶ್ ಚೇರ್ಕಾಡಿ , ಹರೀಶ್ ಪೂಜಾರಿ ಕಡ್ತಲ, ಹೆಬ್ರಿ ಚಾರದ ದಿನೇಶ್ ಕುಮಾರ್ ಮತ್ತು ರಾಜೇಶ್ ಶೆಟ್ಟಿ ಮರ್ಣೆ ಉಪಸ್ಥಿತರಿದ್ದು, ಸಮಿತಿಯ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ಗೌರವಾಧ್ಯಕ್ಷ ಕೆ.‌ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಮುಂಬರುವ ದಿನಗಳಲ್ಲಿ ಥೀಮ್ ಪಾರ್ಕ್‌ನಲ್ಲಿ ಪರಶುರಾಮನ ಪ್ರತಿಮೆಯನ್ನು ಪುನರ್ ಸ್ಥಾಪನೆ ಮಾಡುವಲ್ಲಿ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಸಮಿತಿಯ ಪಾತ್ರಗಳ ಬಗ್ಗೆ ಹಾಗೂ ಸಮಿತಿಯ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಮಾತನಾಡಿ, ಸನಾತನ ಧರ್ಮದ ರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬ ಹಿಂದುವಿನ ಕರ್ತವ್ಯ. ಕರಾವಳಿಯ ಪ್ರತಿ ಗ್ರಾಮದಲ್ಲಿ ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಪರಶುರಾಮ ಮೂರ್ತಿ ಪುನರ್‌ ಪ್ರತಿಷ್ಠಾಪನೆಯ ಬಗ್ಗೆ ಚಿಂತಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಬೇಕು ಎಂದರು.





























































































































error: Content is protected !!
Scroll to Top