ದೆಹಲಿ : ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಬಂಡಾಯ ಶಾಸಕರು ಶುಕ್ರವಾರ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಆರು ಬಂಡಾಯ ಕಾಂಗ್ರೆಸ್ ಶಾಸಕರಾದ ಸುಧೀರ್ ಶರ್ಮ, ರವಿ ಠಾಕೂರ್, ರಾಜಿಂದರ್ ರಾಣಾ, ಇಂದರ್ ದತ್ ಲಖನ್ ಪಾಲ್, ಚೇತನ್ಯ ಶರ್ಮ ಹಾಗೂ ದೇವಿಂದರ್ ಕುಮಾರ್ ಭುಟ್ಟೊ ಅವರನ್ನು ಫೆಬ್ರವರಿ 29ರಂದು ಅನರ್ಹಗೊಳಿಸಲಾಗಿತ್ತು. ಸದನದಲ್ಲಿ ಹಾಜರಿರಬೇಕು ಹಾಗೂ ಹಿಮಾಚಲ ಪ್ರದೇಶ ಸರಕಾರದ ವಿಶ್ವಾಸ ಮತ ಹಾಗೂ ಬಜೆಟ್ ಪರ ಮತ ಚಲಾಯಿಸಬೇಕು ಎಂಬ ಪಕ್ಷದ ವಿಪ್ ಅನ್ನು ಧಿಕ್ಕರಿಸಿದ್ದರಿಂದ ವಿಧಾನಸಭಾ ಸ್ಪೀಕರ್ ಇವರನ್ನೆಲ್ಲ ಅನರ್ಹಗೊಳಿಸಿದ್ದರು. ಇಂದು ಇವೆರಲ್ಲಾ ಹಿಮಾಚಲ ಪ್ರದೇಶ ಬಿಜೆಪಿ ಅಧ್ಯಕ್ಷ ರಾಜೀವ್ ಬಿಂದಾಲ್ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.









































