ಕಿಡ್ನಿ ವೈಫಲ್ಯ ತಡೆಯುವುದು ಹೇಗೆ ?

ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ತೊಂದರೆಗಳು ಅಧಿಕವಾಗಿದೆ. ಅಸಮರ್ಪಕ ಆಹಾರ ಸೇವನೆ, ಜೀವನ ಶೈಲಿಯಲ್ಲಿ ಬದಲಾವಣೆ ಇದಕ್ಕೆ ಪ್ರಮುಖ ಕಾರಣ. ಇದರಿಂದ ಅನೇಕ ಆರೋಗ್ಯ ಸಮಸ್ಯೆ ಉಂಟಾಗಿ ತದನಂತರ ಮೂತ್ರಪಿಂಡಕ್ಕೆ ತೊಂದರೆಯಾಗುವುದು. ಇದರ ಬಗ್ಗೆ ತಿಳಿದುಕೊಳ್ಳೋಣ.

ಮೂತ್ರಪಿಂಡ ವೈಫಲ್ಯ ಎಂದರೇನು?
ಮೂತ್ರಪಿಂಡ ತನ್ನ ಕಾರ್ಯವನ್ನು ನಿಲ್ಲಿಸುವುದಕ್ಕೆ ಮೂತ್ರಪಿಂಡ ವೈಫಲ್ಯವೆಂದು ಕರೆಯುತ್ತಾರೆ.
ಇದಕ್ಕೆ ಕಾರಣಗಳು :
ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಕೆಲವರಿಗೆ ಅನುವಂಶಿಕವಾಗಿಯು ಬರುವ ಸಾಧ್ಯತೆಗಳಿರುತ್ತದೆ. ಮೂತ್ರಪಿಂಡದಲ್ಲಿ ಗಾಯವಾದಾಗ, ಕಿಡ್ನಿಯಲ್ಲಿ ಕಲ್ಲು, ನೋವು ನಿವಾರಕ ಔಷಧಿಯ ವಿಪರೀತ ಸೇವನೆ, ಪಿತ್ತಜನಕಾಂಗ ವೈಫಲ್ಯ, ಸೋಂಕು, ದೈಹಿಕ ಶ್ರಮವಿಲ್ಲದ ಜೀವನ, ಮಸಾಲೆ ಪದಾರ್ಥದ ಸೇವನೆ, ಹುಳಿ, ಉಪ್ಪಿನ ಅಧಿಕ ಸೇವನೆ, ನೀರು ಕಡಿಮೆ ಸೇವಿಸುವುದು.

ಮೂತ್ರಪಿಂಡ ವೈಫಲ್ಯದ ಲಕ್ಷಣಗಳು :
ಇದರಲ್ಲಿ ಎರಡು ವಿಧಗಳಿವೆ. ಅಲ್ಪಾವಧಿ ಮೂತ್ರಪಿಂಡ ವೈಫಲ್ಯ ಹಾಗೂ ದೀರ್ಘಾವಧಿ ಮೂತ್ರಪಿಂಡ ವೈಫಲ್ಯ.
ಅಲ್ಪಾವಧಿ ಮೂತ್ರಪಿಂಡ ವೈಫಲ್ಯದಲ್ಲಿ -ಇದು ಕೆಲವು ದಿನಗಳ ಸಮಯವಿರುವುದು. ಚಿಕಿತ್ಸೆ ನೀಡಿ ಸರಿ ಮಾಡಬಹುದು.
ಧೀರ್ಘಕಾಲದ ಮೂತ್ರಪಿಂಡ ವೈಫಲ್ಯ – ಇದಕ್ಕೆ ಚಿಕಿತ್ಸೆ ಕಷ್ಟಕರ.

ಲಕ್ಷಣಗಳು :
ಕೆಲವರಿಗೆ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕೆಲವರಿಗೆ ಕಾಲುಗಳಲ್ಲಿ ಊತ, ವಾಕರಿಕೆ, ಹಸಿವೆ ಕಡಿಮೆಯಾಗುವುದು, ಆಯಾಸ, ನೊರೆ ಮೂತ್ರ, ಉರಿ ಮೂತ್ರವಾಗುವುದು. ಉಸಿರಾಟದ ತೊಂದರೆ. ಈ ತೊಂದರೆಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿ ನೀಡಿ.

ಮೂತ್ರಪಿಂಡ ವೈಫಲ್ಯ ತಡೆಯಲು ಹೀಗೆ ಮಾಡಿ
ಸಾತ್ವಿಕ ಸಸ್ಯಹಾರಿ ಊಟ ಒಳ್ಳೆಯದು, ತರಕಾರಿ, ಹಣ್ಣು, ಬೇಳೆಕಾಳು ಸರಿಯಾಗಿ ತೊಳೆದು ಉಪಯೋಗಿಸಿ. ಹಾಲು, ಮೊಸರು, ಮಾಂಸಹಾರ ಸೇವನೆ ಕಡಿಮೆ ಮಾಡಿರಿ.
ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ದೇಹದ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಿ.
ಯಾವುದೇ ಕಾರಣಕ್ಕೂ ವೈದ್ಯರನ್ನು ಕೇಳದೆ ಔಷಧಗಳನ್ನು ಸೇವಿಸದಿರಿ.
ಧೂಮ್ರ ಪಾನ ಮಧ್ಯಪಾನದಿಂದ ದೂರವಿರಿ.
ಮಾನಸಿಕ ಒತ್ತಡವನ್ನು ಕಮ್ಮಿ ಮಾಡಿ.
ಧ್ಯಾನ ಮಾಡಿ, ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ.
ದಿನಾಲು 45 ದಿನ ನಿಮಿಷಗಳ ಕಾಲ ವ್ಯಾಯಾಮ, ಯೋಗಾಸನಗಳು, ನಡಿಗೆ, ಪ್ರಾಣಾಯಾಮವನ್ನು ಮಾಡಿರಿ. ಕಪಾಲಿ ಭಾತಿ ಪ್ರಾಣಾಯಾಮ ಮಾಡುವುದು ಒಳ್ಳೆಯದು. ಯೋಗಾಸನಗಳಲ್ಲಿ ಭುಜಂಗಾಸನ, ಧನುರಾಸನ, ಗೋಮುಖಾಸನ, ನೌಕಾಸನ, ಪಶ್ಚಿಮೋತ್ತಾಸನ, ಶಶಾಂಕಸನ, ಪವನಮುಕ್ತಾಸನ, ಕುಕ್ಕುಟಾಸನ ಒಳ್ಳೆಯದು.
ಪುನರ್ನವ, ಗೋಕ್ಷೂರ, ವರುಣ ಔಷದ ಸಸ್ಯಗಳಿಂದ ತಯಾರಿಸಿದ ಔಷಧಗಳು ಒಳ್ಳೆಯದು. ಕದಲಿಕಂದ ರಸ, ಬೂದುಗುಂಬಳ ರಸ, ಕಬ್ಬಿನ ಹಾಲು. ಇವುಗಳ ಸೇವನೆ ಒಳ್ಳೆಯದು.









































































































error: Content is protected !!
Scroll to Top