ಕಾರ್ಕಳ : ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ವತಿಯಿಂದ ನಡೆಸಲ್ಪಟ್ಟ ಬ್ಯಾಚುಲರ್ ಆಫ್ ಆರ್ಕಿಟೆಕ್ಟರ್ -2024 ರ ಪ್ರಥಮ ಹಂತದ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದುರ್ಗಾಶ್ರೀ ಎಂ. 99.1312779 ಪರ್ಸಂಟೈಲ್, ಆದಿತ್ಯ ಅಲಗೌಡ ಪಾಟೀಲ್ 98.5573008 ಮತ್ತು ಪವನ್ ಕೆ. ಎಸ್. 96.1256545 ಪರ್ಸಂಟೈಲ್ ಗಳಿಸಿದ್ದಾರೆ.
ಜೆ.ಇ.ಇ ಮೈನ್ಸ್ ಬಿ. ಪ್ಲಾನಿಂಗ್‌ನಲ್ಲಿ ಸಾನ್ವಿಕುಮಾರ್ 92.7239106 ಹಾಗೂ ಸಚೇತ್ ದಯಾನಂದ ಬಿ. ಎಸ್ 85.7935359 ಪರ್ಸಂಟೈಲ್ ಪಡೆದಿದ್ದಾರೆ.
8 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸಂಟೈಲ್, 11 ವಿದ್ಯಾರ್ಥಿಗಳು 85 ಕ್ಕಿಂತ ಹೆಚ್ಚು ಪರ್ಸಂಟೈಲ್, 17 ವಿದ್ಯಾರ್ಥಿಗಳು 80 ಕ್ಕಿಂತ ಹೆಚ್ಚು ಪರ್ಸಂಟೈಲ್ ಗಳಿಸಿದ್ದಾರೆ.
ಜನವರಿ ತಿಂಗಳಿನಲ್ಲಿ ನಡೆದ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿಯೂ ಕ್ರಿಯೇಟಿವ್ ನ 26 ವಿದ್ಯಾರ್ಥಿಗಳು 97 ಕ್ಕಿಂತ ಹೆಚ್ಚು ಪರ್ಸಂಟೈಲ್ ಗಳಿಸಿರುವುದನ್ನು ಗಮನಿಸಬಹುದಾಗಿದೆ.
ಸಾಧಕ ವಿದ್ಯಾರ್ಥಿಗಳಿಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಬಿ. ಆರ್ಕ್ ಸಂಯೋಜಕ ಸುಮಂತ ದಾಮ್ಲೆ ಅಭಿನಂದನೆ ಸಲ್ಲಿಸಿದ್ದಾರೆ.
















































