ಈದುವಿನಲ್ಲಿ ಜಾನುವಾರು ಅಕ್ರಮ ಸಾಗಾಟ ಶಂಕೆ

ಕಾರ್ಕಳ: ಈದುವಿನಲ್ಲಿ ಜಾನುವಾರು ಅಕ್ರಮ ಸಾಗಾಟ ಪ್ರಕರಣವೊಂದು ಸಂಭವಿಸಿದ್ದು, ಆದರೆ ಪೊಲೀಸರಿಗೆ ಸಾಗಿಸಿದ ಜಾನುವಾರುಗಳು ಸಿಕ್ಕಿಲ್ಲ. ನೂರಾಳ್‌ಬೆಟ್ಟುವಿನ ಚೇತನ್‌ ಎಂಬವರು ಮಾ.6 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಪಿಕ್‌ಅಪ್‌ ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಿಸುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈದು ಗ್ರಾಮದ ಸರಸ್ವತಿ ನಗರದ ಎಂಎಚ್‌ ಮಂಜಿಲ್‌ ಎಂಬ ಮನೆಯ ಆವರಣದಲ್ಲಿ ಜಾನುವಾರುಗಳನ್ನು ಇಳಿಸಿ ಪಿಕ್‌ಅಪ್‌ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ಜಾನುವಾರುಗಳನ್ನು ಮನೆಯ ಹಿಂಬದಿಗೆ ಸಾಗಿಸುವುದನ್ನು ಚೇತನ್‌ ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಬಂದು ಚಾಲಕ ವಿಜಯ್‌ ಎಂಬಾತನನ್ನು ವಿಚಾರಣೆ ನಡೆಸಿದಾಗ ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಪೊಲೀಸರು ಜಾನುವಾರುಗಳನ್ನು ಹುಡುಕಿದರೂ ಸಿಕ್ಕಿಲ್ಲ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ – 2020 ರಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































error: Content is protected !!
Scroll to Top