ಜಗತ್ತಿನಾದ್ಯಂತ ಬಳಕೆದಾರರು ಕಂಗಾಲು
ಕಾರ್ಕಳ : ಭಾರತ ಸೇರಿದಂತೆ ವಿಶ್ವದಾದ್ಯಂತ ಎರಡು ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ಸ್ಟ್ರಗ್ರಾಂ ಲಾಗಿನ್ ಸ್ಥಗಿತಗೊಂಡಿದೆ.
ಮಾ. 5 ರ ರಾತ್ರಿ 9 ಗಂಟೆಯ ಸುಮಾರಿಗೆ ಈ ಎರಡು ಖಾತೆಗಳು ಸ್ಥಗಿತಗೊಂಡಿದೆ.
ಕಾರಣ ತಿಳಿದುಬಂದಿಲ್ಲ. ಆದರೆ, ಬಳಕೆದಾರರು ಕಂಗಲಾಗಿದ್ದಾರೆ. ಈ ಕುರಿತು ಬಳಕೆದಾರರು ತಮ್ಮ ವ್ಯಾಟ್ಸಾಪ್ ಸ್ಟೇಟಸ್ ಗಳಲ್ಲಿ ಮಾಹಿತಿ ಹಂಚಿಕೊಳ್ಳುವುದನ್ನು ಗಮನಿಸಬಹುದಾಗಿದೆ.
ಫೇಸ್ ಬುಕ್ ತೆರೆದಾಗ ಲಾಗಿನ್ ಅಂತ ತೋರಿಸುತ್ತಿದ್ದು, ಲಾಗಿನ್ ಕ್ಲಿಕ್ ಮಾಡಿ ಪಾಸ್ವರ್ಡ್ ನಮೂದಿಸಿದಾಗ ಎರರ್ ಎಂದು ತೋರಿಸುತ್ತಿದೆ.










































