ಹೆಬ್ರಿ ಚಾಣಕ್ಯ ಸಂಸ್ಥೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ

ಹೆಬ್ರಿ : ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಲು ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಬೇಕು. ಭಾರತೀಯ ರಂಗ ಕಲೆಗಳನ್ನು ಅಧ್ಯಯನ ಮಾಡಿದರೆ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಎಲ್ಲಾ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ತರಬೇತಿ ನೀಡುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗಿದೆ ಎಂದು ಯಕ್ಷಗಾನ ಗುರು ಸುಬ್ರಹ್ಮಣ್ಯ ಪ್ರಸಾದ್ ಹೇಳಿದರು.
ಅವರು ಹೆಬ್ರಿ ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನೂತವಾಗಿ ಆರಂಭಗೊಂಡ ಯಕ್ಷಗಾನ ತರಗತಿಗೆ ಭಾಗವತಿಗೆಯ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಚಾರ ವಾದಿರಾಜ್ ಶೆಟ್ಟಿ, ಭಾಷೆಯಲ್ಲಿ ಹಿಡಿತವಿರುವ ಯಕ್ಷಗಾನ ಕಲೆ ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 10 ವರ್ಷಗಳಿಂದ ಕಲಾ ಪ್ರಕಾರಗಳೆಲ್ಲವನ್ನು ತರಬೇತಿ ನಿಡುವುದರ ಜತೆಗೆ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಈ ಭಾರಿ ಯಕ್ಷಗಾನ ಕಲೆಯನ್ನು ತರಬೇತಿ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಮೂಡುಬಿದಿರೆ ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಹಾಗೂ ಯಕ್ಷಗಾನ ಸಂಘಟಕ ದಯಾನಂದ ಶೆಟ್ಟಿ ಮಾತನಾಡಿ ಚಾಣ್ಯಕ್ಯ ಸಂಸ್ಥೆ ಕಾರ್ಯ ವೈಖರಿಯ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಚಾಣಕ್ಯ ಏಜ್ಯುಕೇಶನ್ & ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಚಾಣಕ್ಯ ಸಂಸ್ಥೆ ಕಲೆಯ ಎಲ್ಲಾ ಪ್ರಕಾರಗಳನ್ನು ತರಬೇತಿ ನಿಡುವುದರ ಜತೆಗೆ ಉಚಿತ ಚೆಸ್ ತರಗತಿ ಹಾಗೂ ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೇ. 50 ರಿಯಾಯಿತಿ ದರದಲ್ಲಿ ಚಿತ್ರಕಲಾ ತರಬೇತಿ ನೀಡುತ್ತಿದೆ. ಅಲ್ಲದೆ ಆಯ್ದ ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ಹಾಗೂ ಇತರ ಕಲಾ ತರಗತಿಯನ್ನು ಉಚಿತವಾಗಿ ನೀಡಿ ಅವರಲ್ಲಿರುವ ಆಸಕ್ತಿಗೆ ಸೂಕ್ತ ವೇದಿಕೆ ಕಲ್ಪಿಸಲಾಗುತ್ತದೆ ಎಂದ ಅವರು ಫೆ.29ರ ಒಳಗೆ ಯಕ್ಷಗಾನ ತರಗತಿಗೆ ಪ್ರವೇಶ ಪಡೆದವರಿಗೆ ರೂ. 1000 ಪ್ರವೇಶ ಶುಲ್ಕ ಉಚಿತವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಚಾಣಕ್ಯ ಮೇಲೋಡಿಸ್‌ನ ಗಾಯಕ ನಿತ್ಯಾನಂದ ಭಟ್‌ ಪ್ರಾರ್ಥಿಸಿದರು. ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ವಂದಿಸಿದರು.



















































































error: Content is protected !!
Scroll to Top