ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕಂದಾಯ ಇಲಾಖೆಯು ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಕಂದಾಯ ಇಲಾಖೆಯಲ್ಲಿ ಒಟ್ಟು 1000 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್‌ 4 ಅರ್ಜಿ ಸಲ್ಲಿಸಲು ಪ್ರಾರಂಭವಾಗಲಿದ್ದು, ಏಪ್ರಿಲ್ 3, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು.

ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ?
ಬೆಂಗಳೂರು ನಗರ- 32, ಬೆಂಗಳೂರು ಗ್ರಾಮಾಂತರ- 34, ಚಿತ್ರದುರ್ಗ -32, ಕೋಲಾರ- 45, ತುಮಕೂರು-73, ರಾಮನಗರ -51, ಚಿಕ್ಕಬಳ್ಳಾಪುರ -42, ಶಿವಮೊಗ್ಗ -31, ಮೈಸೂರು 66, ಚಾಮರಾಜನಗರ -55, ಮಂಡ್ಯ -60, ಹಾಸನ -54, ಚಿಕ್ಕಮಗಳೂರು -23, ಕೊಡಗು -6, ಉಡುಪಿ 22, ದಕ್ಷಿಣ ಕನ್ನಡ -50, ಬೆಳಗಾವಿ-64, ವಿಜಯಪುರ- 7, ಬಾಗಲಕೋಟೆ- 22, ಧಾರವಾಡ -12, ಗದಗ -30, ಹಾವೇರಿ- 34, ಉತ್ತರ ಕನ್ನಡ- 2, ಕಲಬುರಗಿ-67, ರಾಯಚೂರು 4, ಕೊಪ್ಪಳ -19, ಬಳ್ಳಾರಿ- 17, ಬೀದರ್- 24, ಯಾದಗಿರಿ- 9, ವಿಜಯನಗರ- 3

ಶೈಕ್ಷಣಿಕ ಅರ್ಹತೆ
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ, ಡಿಪ್ಲೊಮಾ, ITI ಪೂರ್ಣಗೊಳಿಸಿರಬೇಕು.

ವಯೋಮಿತಿ:
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
2A, 2B, 3A, 3B ಅಭ್ಯರ್ಥಿಗಳು 03 ವರ್ಷಗಳು
SC/ST ಅಭ್ಯರ್ಥಿಗಳು 05 ವರ್ಷಗಳು

ಅರ್ಜಿ ಶುಲ್ಕ:
2A, 2B, 3A, 3B ಅಭ್ಯರ್ಥಿಗಳು 750/-
SC/ST ಅಭ್ಯರ್ಥಿಗಳು 500/-

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

































































































































































error: Content is protected !!
Scroll to Top