ಕಾರ್ಕಳ : ಕೌಡೂರು ಬಾಣಲು ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನಾಗಬ್ರಹ್ಮ ಸ್ಥಾನದ ವಾರ್ಷಿಕ ವರ್ಧಂತಿ ಮತ್ತು ಬಾಣಲು ಕೋಲ ಫೆ. 24ರಿಂದ 27 ರವರೆಗೆ ಜರುಗಲಿದೆ.
ಫೆ. 24ರಂದು ಬೆಳಿಗ್ಗೆ 9 ಗಂಟೆಯಿಂದ ನಾಗಬ್ರಹ್ಮ ಸ್ಥಾನದಲ್ಲಿ ದೇವತಾ ಪ್ರಾರ್ಥನೆ, ನವಕ ಪ್ರಧಾನಾಧಿ ಪೂಜಾವಿಧಿಗಳು, ತನು ತಂಬಿಲ ಸೇವೆ, 10 ಗಂಟೆಗೆ ನಾಯರಬೆಟ್ಟು ಮನೆಯಿಂದ ದೈವದ ಭಂಡಾರ ಹೊರಡುವುದು. ನಂತರ ಬಾಣಾಲಿನಲ್ಲಿ ದೈವಗಳಿಗೆ ಪುಣ್ಯಾಹ, ನವಕ ಪ್ರಧಾನ ಹೋಮ, ಅಭಿಷೇಕ, ತನು ತಂಬಿಲ ಸೇವೆಯಾಗಿ ಬಳಿಕ ನಾಗಬನದಲ್ಲಿ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಸುವಾಸಿನೀ ವಟು ಬ್ರಾಹ್ಮಣಾರಾಧನೆಯಾಗಿ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5 ಗಂಟೆಯಿಂದ ಕಂಬ ಮುಹೂರ್ತ, ಚಪ್ಪರ ಮುಹೂರ್ತ, ದರ್ಶನ, ನಂಬಿಗೆ ಪ್ರಸಾದ ನಡೆಯಲಿದೆ.
ಫೆ. 25ರಂದು ಸಂಜೆ 4.30ರಿಂದ ಕೊಡಮಣಿತ್ತಾಯ ಭಂಡಾರ ಇಳಿಯುವುದು. 7 ಗಂಟೆಗೆ ಧರ್ಮರಸು ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳಿಗೆ ಸಿರಿ ಸಿಂಗಾರ ನರ್ತನ ಸೇವೆ, ಬೆಳಗಿನ ಜಾವ 3.30ರಿಂದ ಅಗೆಲು ಸೇವೆ ನಡೆಯಲಿದೆ.
ಫೆ. 26ರಂದು ಸಂಜೆ 4.30ಕ್ಕೆ ಬೈದರ್ಕಳ ಭಂಡಾರ ಬ್ರಹ್ಮರಗುಂಡದಲ್ಲಿ ಬ್ರಹ್ಮರ ಪೀಠಾರೋಹಣ, ರಾತ್ರಿ 7ಗಂಟೆಗೆ ಸೆರೆ-ಸೆರೆ, ಬೈದರ್ಕಳ ನೇಮ, ದರ್ಶನ, ಜೋಗಿ ಪುರುಷ ಕೋಲ ನಡೆಯಲಿದೆ.
ಫೆ. 27ರಂದು ಸಂಜೆ 4 ಗಂಟೆಯಿಂದ ಮೈಸಂದಾಯ ಪಿಲಿ ಚಾಮುಂಡಿ ದೈವದ ಕೋಲ ಜರುಗಲಿದೆ ಎಂದು ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
































































