ಅಕ್ಬರ್‌-ಸೀತೆ ಜೊತೆಯಲ್ಲಿರಿಸಿದ್ದಕ್ಕೆ ವಿಹಿಂಪ ಆಕ್ಷೇಪ

ಕೊಲ್ಕತ್ತಾ: ಅಕ್ಬರ್‌ ಮತ್ತು ಸೀತೆಯನ್ನು ಜೊತೆಯಲ್ಲಿರಿಸಿರುವುದು ಹಿಂದುಗಳ ನಂಬಿಕೆಗೆ ಉದ್ದೇಶಪೂರ್ವಕವಾಗಿ ಮಾಡಿರುವ ಅಪಚಾರ ಎಂದು ವಿಶ್ವಹಿಂದು ಪರಿಷತ್‌ ಕಿಡಿಕಾರಿದೆ. ಅಕ್ಬರ್‌ ಎಂದರೆ ಗಂಡು ಸಿಂಹ ಮತ್ತು ಸೀತೆ ಎಂದು ಹೆಣ್ಣು ಸಿಂಹ. ಇವರು ಜೊತೆಯಾಗಿರುವುದು ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿ. ಇದು ಈಗ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇಲ್ಲಿ ಅಕ್ಬರ್ ಎಂಬ ಸಿಂಹ ಮತ್ತು ಸೀತಾ ಎಂಬ ಸಿಂಹಿಣಿಯನ್ನು ಒಂದೇ ಆವರಣದಲ್ಲಿ ಇರಿಸಲಾಗಿದೆ ಎಂದು ಅರಣ್ಯ ಇಲಾಖೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಪಶ್ಚಿಮ ಬಂಗಾಳ ವಿಭಾಗ ಕಲ್ಕತ್ತಾ ಹೈಕೋರ್ಟ್‌ನ ಜಲ್ಪೈಗುರಿ ಸರ್ಕ್ಯೂಟ್ ಬೆಂಚ್‌ಗೆ ಅರ್ಜಿ ಸಲ್ಲಿಸಿದೆ.

ಫೆಬ್ರವರಿ 13ರಂದು ಅರಣ್ಯ ಅಧಿಕಾರಿಗಳು ಏಳು ವರ್ಷದ ಅಕ್ಬರ್ ಎಂಬ ಹೆಸರಿನ ಸಿಂಹ ಮತ್ತು ಐದು ವರ್ಷದ ಸೀತಾ ಹೆಸರಿನ ಸಿಂಹಿಣಿಯನ್ನು ತ್ರಿಪುರದ ಮೃಗಾಲಯದಿಂದ ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್‌ಗೆ ಕರೆತಂದಿದ್ದಾರೆ.
ಇದರ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಸೀತೆಯನ್ನು ಅಕ್ಬರ್ ಜೊತೆ ಇಡುವುದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ಆಕ್ಷೇಪ ಎತ್ತಿದೆ. ಶ್ರೀರಾಮನ ಪತ್ನಿಯಾದ ಸೀತೆಯ ಹೆಸರನ್ನು ಸಿಂಹಿಣಿಗೆ ಇಡಲಾಗಿದೆ. ಪ್ರಪಂಚದಾದ್ಯಂತದ ಎಲ್ಲ ಹಿಂದೂಗಳಿಗೆ ಸೀತೆ ದೇವತೆಯಾಗಿದ್ದಾಳೆ. ಹೀಗಾಗಿ ಎರಡು ಸಿಂಹಗಳನ್ನು ಜತೆಯಲ್ಲಿರಿಸುವುದು ಧರ್ಮ ನಿಂದನೆಯಾಗುತ್ತದೆ. ಹೀಗಾಗಿ ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ವಿಹಿಂಪ ಕೋರಿದೆ.
ಫೆಬ್ರವರಿ 16 ರಂದು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಪೀಠದ ಮುಂದೆ ಅರ್ಜಿಯನ್ನು ಸಲ್ಲಿಸಲಾಗಿದ್ದು , ಫೆಬ್ರವರಿ 20 ರಂದು ವಿಚಾರಣೆ ನಡೆಯಲಿದೆ.



















































































error: Content is protected !!
Scroll to Top