ಫೆ. 17 : ಅತ್ತೂರು ಯುವಕ ಮಂಡಲ – 44ನೇ ವರ್ಷದ ವಾರ್ಷಿಕೋತ್ಸವ

ಕಾರ್ಕಳ : ಅತ್ತೂರು ಯುವಕ ಮಂಡಲದ 44ನೇ ವರ್ಷದ ವಾರ್ಷಿಕೋತ್ಸವ ಇಂದು (ಫೆ. 17) ಯುವಕ ಮಂಡಲದ ರಜತ ವೇದಿಕೆಯಲ್ಲಿ ನಡೆಯುತಿದ್ದು,
ಬೆಳಿಗ್ಗೆ ನಿಟ್ಟೆ ಗ್ರಾ. ಪಂ. ಉಪಾಧ್ಯಕ್ಷ ನಿತಿನ್‌ ಸಾಲ್ಯಾನ್ ಧ್ವಜಾರೋಹಣ ನೇರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ
ಸಂಜೆ 6ಗಂಟೆಗೆ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳಿಂದ ಜನಪದ ಶೈಲಿಯ ನೃತ್ಯ ವೈವಿಧ್ಯ ನಡೆಯಲಿದೆ.
ಸಂಜೆ 7.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಯುವಕ ಮಂಡಲದ ಅಧ್ಯಕ್ಷ ಧನುಷ್‌ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಆಸ್ಥಾನ ಜ್ಯೋತಿಷ್ಯರು ಹಾಗೂ ವಾಸ್ತು ಶಿಲ್ಪ ತಜ್ಞ ಗುರೂಜಿ ಉಮೇಶ ಆಚಾರ್ಯ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪದವು ಮಹಾಲಕ್ಷ್ಮೀ ಇಂಟರ್‌ಲಾಕ್ ಮಾಲಕ ನವೀನ್ ನಾಯಕ್, ಗುಂಡ್ಯಡ್ಕ ಗಾಯತ್ರಿ ಕ್ಯಾಶ್ಯೂ ಎಕ್ಸ್‌ಪೋರ್ಟ್ಸ್ ಮಾಲಕ ಬೋಳ ಶ್ರೀನಿವಾಸ ಕಾಮತ್, ಅತ್ತೂರು ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ರಮೇಶ ದೇವಾಡಿಗ, ಯುವಕ ಮಂಡಲದ ಕಾರ್ಯದರ್ಶಿ ಸುಭಾಷ್ ಕುಂದರ್, ಮುಲ್ಕಿ ಶ್ರೀ ಕೃಷ್ಣ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ಮಾಲಕ ಚೇತನ್ ಕೆ. ಕೋಟ್ಯಾನ್, ನಿಟ್ಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿರಲಿದ್ದಾರೆ.

ಸನ್ಮಾನ – ನಾಟಕ
ಕಾರ್ಯಕ್ರಮದಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಸಂಘದ ಹಿರಿಯ ಕಲಾವಿದರಾದ ಸುಕುಮಾರ ಭಂಡಾರಿ ಹಾಗೂ ಎಂ. ಗೋಪಾಲ್ ಮೂಲ್ಯ ಅವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮ ಬಳಿಕ ರಾಜೇಶ್ ಆಚಾರ್ಯ ಪರ್ಕಳ ಅವರು ರಚಿಸಿ ಸಂಗೀತ ನೀಡಿರುವ ಸಾಮಾಜಿಕ ಹಾಸ್ಯಮಯ ತುಳು ನಾಟಕ ಬದುಕೊಂಜಿ ಅಲೆಗಾದ್‌ ಪ್ರದರ್ಶನಗೊಳ್ಳಲಿದೆ.

















































error: Content is protected !!
Scroll to Top