ಬೈಕ್‌ಗಳ ನಡುವೆ ಡಿಕ್ಕಿ – ಸವಾರನಿಗೆ ಗಾಯ

ಕಾರ್ಕಳ : ಬೈಕ್‌ಗಳ ನಡುವೆ ಡಿಕ್ಕಿಯಾದ ಪರಿಣಾಮ ಸವಾರ ಗಾಯಗೊಂಡಿರುವ ಘಟನೆ ಫೆ. 13ರಂದು ಪಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಸುಂದರ ಎಂಬವರು ತಮ್ಮ ಮೋಟಾರ್‌ ಸೈಕಲ್‌ನಲ್ಲಿ ಪಳ್ಳಿ ಗ್ರಾಮದ ಮುತ್ತುರತ್ನ ಸರ್ವಿಸ್ ಸ್ಟೇಶನ್ ಬಳಿ ಕಾರ್ಕಳ ಕಡೆಗೆ ಬರುತ್ತಿರುವಾಗ ಆರೋಪಿ ಕೆಎ-20 ಹೆಚ್‌‌‌ಎ-1827ನೇ ನೋಂದಾಯಿತ ಮೋಟಾರ್ ಸೈಕಲ್‌‌ನ್ನು ಸವಾರಿ ಮಾಡಿಕೊಂಡು ಬರುತ್ತಿದ್ದು ಸುಂದರ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಸುಂದರ ಅವರ ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆ ಬಳಿಕ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ಅರೆಪ್ರಜ್ಜಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಅಪಘಾತದ ಸಮಯ ಆರೋಪಿಯು ಗಾಯಾಳುವಿಗೆ ಯಾವುದೇ ಚಿಕಿತ್ಸೆ ನೀಡಲು ಸಹಕರಿಸಿಲ್ಲ ಎಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.











































































error: Content is protected !!
Scroll to Top