ಕಾರ್ಕಳ: ಹಿರಿಯಂಗಡಿಯ ಯೋಗೀಶ ಎಂಬವರು ಫೆ. 14ರಂದು ಗುಡ್ಡಕ್ಕೆ ದನ ಕಟ್ಟಲೆಂದು ಹೋದವರು ಬಿದ್ದು ಮೃತಪಟ್ಟಿದ್ದಾರೆ. ಕಾಲು ಜಾರಿ ಅಥವಾ ಅಸ್ವಸ್ಥರಾಗಿ ಅವರು ಬಿದ್ದಿರಬಹುದು ಎನ್ನಲಾಗಿದೆ. ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರ ಸಹೋದರ ಹರೀಶ ಎಂಬವರು ನೀಡಿದ ದೂರಿನ ಪ್ರಕಾರ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದನ ಕಟ್ಟಲೆಂದು ಹೋದ ವ್ಯಕ್ತಿ ಸಾವು































































