ನಾಳೆ ಸಿದ್ದರಾಮಯ್ಯ ಬಜೆಟ್‌ ಮಂಡನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.16ರಂದು ವಿಧಾನಸಭೆಯಲ್ಲಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆ ಪ್ರಾರಂಭವಾಗಲಿದೆ. ಬಜೆಟ್​​ ಮಂಡನೆ ಮುನ್ನ ಸಿದ್ಧರಾಮಯ್ಯ ವಿಶೇಷ ಸಂಪುಟ ಸಭೆ ನಡೆಸಲಿದ್ದಾರೆ. ಇದು ಸಿದ್ದರಾಮಯ್ಯ ಮಂಡಿಸುವ 15ನೇ ಬಜೆಟ್. ಕರ್ನಾಟಕದ ಮಟ್ಟಿಗೆ ಇದೊಂದು ಹೊಸ ದಾಖಲೆಯಾಗಿದೆ.

ಈ ಬಾರಿ ರಾಜ್ಯದ ಬಜೆಟ್ ಗಾತ್ರ 3.80 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಈವರೆಗೂ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ. ದಾಟಿರಲಿಲ್ಲ. ಆದರೆ ಈ ಬಾರಿ ಸುಮಾರು 50 ಸಾವಿರ ಕೋಟಿ ರೂ.ಹೆಚ್ಚಳವಾಗಲಿದೆ. ಇದರೊಂದಿಗೆ ಈ ಬಾರಿ ಬಜೆಟ್​ ಗಾತ್ರ 3.80 ಲಕ್ಷ ಕೋಟಿ ರೂ.ತಲುಪಲಿದೆ.

ಸರಕಾರದ ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಬಜೆಟ್‌ ಕುತೂಹಲ ಮೂಡಿಸಿದೆ. ಗ್ಯಾರಂಟಿಗಳಿಗೆ ಸರಕಾರ ಹೇಗೆ ಹಣ ಹೊಂದಿಸಲಿದೆ, ಹೊಸ ಯೋಜನೆಗಳು ಸಿಗಬಹುದಾ, ಹೊಸ ಜಿಲ್ಲೆ, ತಾಲೂಕುಗಳು ಘೋಷಣೆಯಾಗಬಹುದಾ? ಬರ ಪರಿಹಾರಕ್ಕೆ ಯಾವ ರೀತಿ ಅನುದಾನ ಹಂಚಿಕೆಯಾಗುತ್ತದೆ ಎಂಬಿತ್ಯಾದಿ ಕುತೂಹಲವಿದೆ. ವಿಪಕ್ಷ ಈಗಾಗಲೇ ಸರಕಾರದ ಬಳಿ ಹಣ ಇಲ್ಲ ಎಂದು ಟೀಕಿಸುತ್ತಿದೆ.































































































































error: Content is protected !!
Scroll to Top