ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆಯಲ್ಪಟ್ಟ ಮಹಿಳೆ ಸಾವು

ಮಂಗಳೂರು: ಚಲಿಸುತ್ತಿರುವ ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ಮಹಿಳೆ ದುರ್ಮರಣಕ್ಕೀಡಾದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಇಂದು ನಡೆದಿದೆ. ಉಪ್ಪಿನಂಗಡಿಯ ನಿನ್ನಿಕಲ್ ನಿವಾಸಿ ರಾಧ(66) ಮೃತ ಮಹಿಳೆ. ಇವರು ಬಸ್‍ನಿಂದ ಹೊರಗೆಸೆಯಲ್ಪಟ್ಟ ದೃಶ್ಯ ಬಸ್ಸಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಗುವನ್ನು ಹಿಡಿದುಕೊಂಡು ಮಹಿಳೆಯೊಬ್ಬರು ಬಸ್ ಹತ್ತಿದ್ದರು. ರಾಧಾ ಆ ಮಹಿಳೆಗೆ ಸೀಟು ಬಿಟ್ಟುಕೊಟ್ಟು ಮುಂದಿನ ಬಾಗಿಲ ಬಳಿ ಬಸ್ಸಿನ ಸರಳು ಹಿಡಿದುಕೊಂಡು ನಿಂತಿದ್ದರು. ಈ ವೇಳೆ ಕೈ ಜಾರಿ ರಾಧಾ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದಾರೆ.ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ರಾಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ, ನಿರ್ವಾಹಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







































error: Content is protected !!
Scroll to Top