ಆರೋಗ್ಯ ಧಾರ : ಹರಳೆಣ್ಣೆಯ ಆರೋಗ್ಯಕಾರಿ ಉಪಯೋಗಗಳು

ಹರಳೆಣ್ಣೆಯು ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ಮಾತ್ರವಲ್ಲದೆ ಇತರ ಅನೇಕ ಲಾಭವನ್ನು ನೀಡುತ್ತದೆ. ಇದರ ಬಾಹ್ಯ ಪ್ರಯೋಗವಲ್ಲದೆ ಇದರ ಸೇವನೆಯೂ ಕೂಡ ಮಾಡುತ್ತಾರೆ. ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳಲ್ಲಿ ಹರಳೆಣ್ಣೆಯನ್ನು ಉಪಯೋಗಿಸುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳೋಣ.

ಸಂಸ್ಕೃತದಲ್ಲಿ ಇದಕ್ಕೆ ʼʼಏರಂಡʼʼ ಎಂದು ಹೆಸರು.

ಗುಣಗಳು- ರುಚಿಯಲ್ಲಿ ಸಿಹಿ, ಕಹಿ ಹಾಗೂ ಒಗರುವಿರುತ್ತದೆ. ಸ್ವಭಾವದಲ್ಲಿ ಉಷ್ಣ ವೀರ್ಯ. ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ವಾತ ಹಾಗು ಕಫ ದೋಷವನ್ನು ಸಮತೋಲನದಲ್ಲಿಡುತ್ತದೆ. ಒಗರು ಹಾಗು ಸಿಹಿ ಇರುವುದರಿಂದ ಪಿತ್ತವನ್ನು ಕೂಡ ಸಮತೋಲನದಲ್ಲಿಡುತ್ತದೆ.

ಆರೋಗ್ಯ ಲಾಭಗಳು
ಬಾಹ್ಯ ಪ್ರಯೋಗದಿಂದಾಗುವ ಲಾಭಗಳು-
ಹರಳೆಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲ ಬೆಳವಣಿಗೆ ಹೆಚ್ಚುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. ತ್ವಚೆಗೆ ಹಚ್ಚುವುದರಿಂದ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಉರಿ ಊತದಲ್ಲಿ ಉಪಯೋಗಿಸುತ್ತಾರೆ. ಅನೇಕ ತ್ವಚೆಯ ರೋಗಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಬೆನ್ನು ನೋವಿಗೆ ಒಳ್ಳೆಯ ಪರಿಣಾಮ ನೀಡುತ್ತದೆ. ಆಮವಾತದಲ್ಲಿ ಇದರ ಎಣ್ಣೆಯನ್ನು ಹಚ್ಚಲಾಗುತ್ತದೆ. ಎಣ್ಣೆಯಿಂದ ಅಭ್ಯಂಗ ಮಾಡುವುದರಿಂದ ದೇಹಕ್ಕೆ, ಕೂದಲಿಗೆ, ಕಣ್ಣಿಗೆ ಒಳ್ಳೆಯದು.

ಇದರ ಸೇವನೆಯಿಂದ ಲಾಭಗಳು-
ದೇಹ ಶುದ್ದಿ ಮಾಡುತ್ತದೆ. ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಆರೋಗ್ಯವನ್ನು ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಷಮ ಜ್ವರವನ್ನು ಗುಣಪಡಿಸುತ್ತದೆ. ಮಲಬದ್ಧತೆಯನ್ನು ದೂರ ಮಾಡುತ್ತದೆ. ಜಂತು ಹುಳವನ್ನು ಹೊರ ಹಾಕುತ್ತದೆ. ತ್ವಚೆಯ ರೋಗಗಳಲ್ಲಿ ಉಪಯೋಗಿಸುತ್ತಾರೆ. ರಕ್ತ ಚಲನೆಯನ್ನು ಸುಧಾರಿಸುತ್ತದೆ. ಪಂಚಕರ್ಮದಲ್ಲಿ ವಿರೇಚನ ಚಿಕಿತ್ಸೆ ಮಾಡಲು ಇದನ್ನು ಬಹಳ ಉಪಯೋಗಿಸುತ್ತಾರೆ.

ಅಧಿಕ ಸೇವನೆಯಿಂದ ಅಪಾಯ
ಹೊಟ್ಟೆ ನೋವು, ವಾಕರಿಕೆ, ತಲೆ ಸುತ್ತು ಇದರ ಅಧಿಕ ಸೇವನೆಯಿಂದ ಆಗುವ ದುಷ್ಪರಿಣಾಮಗಳು. ಗರ್ಭಿಣಿಯರು ಇದನ್ನು ಸೇವಿಸಬಾರದು. ವೈದ್ಯರ ಸಲಹೆ ಪಡೆಯದೆ ಇದನ್ನು ಸೇವಿಸಬೇಡಿ.

ಆಯುರ್ವೇದ ಔಷಧಗಳು – ಗಂಧರ್ವಹಸ್ಥಾದಿ ತೈಲ, ಬೃಹತ್ ಸೈಂಧವಾದಿ ತೈಲ, ಅಮವಾತಾರಿ ರಸ, ಸಿಂಹನಾದ ಗುಗ್ಗುಲು.







































































error: Content is protected !!
Scroll to Top