ಜೇಸಿಐ ಕಾರ್ಕಳ – ವಿಶೇಷ ಮಕ್ಕಳಿಗಾಗಿ ವಾಟರ್‌ ಫನ್‌ ರೈಡ್

ಕಾರ್ಕಳ : ಜೇಸಿಐ ಕಾರ್ಕಳ ಮತ್ತು ಕಾರ್ಲ ಕರಾವಳಿ ಅಡ್ವೆಂಚರ್ಸ್‌ ಇವರ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಜ. 25ರಂದು ಮಧ್ಯಾಹ್ನ 3 ಗಂಟೆಗೆ ಆನೆಕೆರೆಯಲ್ಲಿ ಉಚಿತವಾಗಿ ವಾಟರ್‌ ಫನ್‌ ರೈಡ್‌ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ, ಆನೆಕೆರೆ ಬಸದಿ ಸಮಿತಿ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ, ಕಾರ್ಕಳ ಲಯನ್ಸ್ ಕ್ಲಬ್‌ ಅಧ್ಯಕ್ಷ ಸಚ್ಚೀಂದ್ರ ಶೆಟ್ಟಿ, ವಿನ್ಯಾಸ್‌ ಹಾರ್ಡ್‌ವೇರ್‌ ಮಾಲಕ ಶ್ರೀಪತಿ ಪ್ರಭು, ಪ್ರಿಯದರ್ಶಿನಿ ಗ್ಯಾಸ್‌ ಏಜೆನ್ಸಿ ಮಾಲಕ ಕೃಷ್ಣಮೂರ್ತಿ, ಇಂಜಿನಿಯರ್‌ ನಜೀ಼ರ್‌ ಶೇಖ್‌, ಮಹೇಶ್‌ ಭಟ್‌, ಕಲಾವಿದ ರಮಾನಂದ ನಾಯಕ್‌ ಜೋಡುರಸ್ತೆ ಹಾಗೂ ಜೆಎಸಿ ವೈಸ್‌ ಚೇರ್‌ಮೆನ್‌ ಸಮದ್‌ ಖಾನ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































































error: Content is protected !!
Scroll to Top