ಜ. 22 : ಕಾರ್ಕಳ ರಾಮ ಕ್ಷತ್ರೀಯ ಸಂಘ – ಶ್ರೀರಾಮೋತ್ಸವ

ಕಾರ್ಕಳ : ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮಮಂದಿರ ಲೋಕಾರ್ಪಣೆಯ ಅಂಗವಾಗಿ ಕಾರ್ಕಳ ರಾಮ ಕ್ಷತ್ರೀಯ ಸಂಘದ ವತಿಯಿಂದ ಜ. 22 ರಂದು ಬಂಡಿಮಠದಲ್ಲಿರುವ ಶ್ರೀರಾಮ ಸಭಾಭವನದಲ್ಲಿ ಶ್ರೀ ರಾಮೋತ್ಸವ – ಶ್ರೀ ರಾಮ ದೀಪ ಪ್ರಜ್ವಲನೆ ಕಾರ್ಯಕ್ರಮ ನಡೆಯಲಿದೆ.

ಸ್ಪರ್ಧೆ – ಸಂಕೀರ್ತನೆ – ಸನ್ಮಾನ
ಕಾರ್ಯಕ್ರಮದಲ್ಲಿ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀ ಬಾಲರಾಮ ವೇಷ ಸ್ಪರ್ಧೆ, ಕಿರಿಯರಿಂದ ಹಿರಿಯವರೆಗೆ ರಾಮಾಯಣ ಕುರಿತ ರಸಪ್ರಶ್ನೆ ನಡೆಯಲಿದ್ದು, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಕೆ. ಶಿವಾನಂದ ಅವರಿಂದ ಶ್ರೀ ರಾಮ ಸಂಕೀರ್ತನೆ ಬಳಿಕ ರಾಮಜನ್ಮ ಭೂಮಿ ಹೋರಾಟದ ಕರಸೇವಕರಿಗೆ ಸನ್ಮಾನ ನಡೆಯಲಿದೆ.

ಸೆಲ್ಫಿ ಪೋಟೋ ಸ್ಪರ್ಧೆ
-ಕಾರ್ಯಕ್ರಮದ ಅಂಗವಾಗಿ ಸೆಲ್ಫಿ ಸ್ಪರ್ಧೆ ಆಯೋಜಿಸಿದ್ದು, ಜ. 21ರಂದು ಸಾಯಂಕಾಲ ನಿಮ್ಮ ಮನೆಯಲ್ಲಿ ಎಲ್ಲರೂ ಸೇರಿ ರಾಮೋತ್ಸವ ಆಚರಣೆಯ ಪ್ರಯುಕ್ತ -ದೀಪ/ಹಣತೆಗಳನ್ನು ಬೆಳಗಿಸಿಸೆಲ್ಫಿ ಪೋಟೋವನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕಳುಹಿಸಿ.
ನಿಯಮಗಳು
-ಸಾಂಪ್ರದಾಯಿಕ ಉಡುಗೆಯೊಂದಿಗೆ (ರಂಗೋಲಿ ಹಾಕಿಯೂ ಆಗಬಹುದು)
-ದೀಪ(ಹಣತೆಯೂ ಆಗಬಹುದು) ಬೆಳಗಿಸಿ.
-ರಾಮನ ಡ್ರಾಯಿಂಗ್, ಮೂರ್ತಿ , ಧ್ವಜ, ರಾಮ -ರಾಮಾಯಣ ಸಂಬಂದ ಪಟ್ಟ ವಸ್ತುಗಳ ಜತೆ.
-ಕ್ಯಾಮರಾದಲ್ಲಿ ದಿನಾಂಕ ಬರುವಂತೆ ಸೆಲ್ಫಿ ಇರಬೇಕು
-ನಿಮ್ಮ ಸೆಲ್ಫಿಯನ್ನು ಜ. 22ರ ಬೆಳಿಗ್ಗೆ 10ರ ಒಳಗೆ ಕಡ್ಡಾಯವಾಗಿ ವಾಟ್ಸಪ್ ಮೂಲಕ ಕಳುಹಿಸಬೇಕು. ಅನಂತರದ ಬಂದ ಸೆಲ್ಫಿಯನ್ನು ಪರಿಗಣಿಸಲಾಗುವುದಿಲ್ಲ.
-ನಿಮ್ಮ ಸೆಲ್ಫಿಯನ್ನು ಕಳುಹಿಸಬೇಕಾದ ವಾಟ್ಸಪ್ No. 91 7619510024
-ಆಯ್ಕೆಗಾರರ ತೀರ್ಮಾನವೇ ಅಂತಿಮ
-ಆಯ್ಕೆಯಾಗುವ ಬೆಸ್ಟ್ 5ರಲ್ಲಿ, ಅತ್ಯುತ್ತಮ ಒಂದಕ್ಕೆ ಬಹುಮಾನವನ್ನು ಜ. 22ರ ಸಂಜೆ ಶ್ರೀರಾಮ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

































































error: Content is protected !!
Scroll to Top