ಹೆಬ್ರಿ : ರಸ್ತೆ ಕ್ರಾಸ್ ಮಾಡಲು ನಿಲ್ಲಿಸಿದ್ದ ರಿಕ್ಷಾಕ್ಕೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಘಟನೆ ಜ. 20ರಂದು ಹೆಬ್ರಿ ಜಂಕ್ಷನ್‌ನಲ್ಲಿ ಸಂಭವಿಸಿದೆ. ರಮೇಶ ಎಂಬವರು ರಿಕ್ಷಾದಲ್ಲಿ ಮುದ್ರಾಡಿ ಕಡೆಯಿಂದ ಕುಚ್ಚೂರು ಕಡೆಗೆ ಹೋಗುತ್ತಿದ್ದಾಗ ಹೆಬ್ರಿ ಜಂಕ್ಷನ್ ಬಳಿ ಉಡುಪಿ-ಶಿವಮೊಗ್ಗ ರಸ್ತೆಯಲ್ಲಿ ರಸ್ತೆ ಕ್ರಾಸ್ ಮಾಡಲು ನಿಲ್ಲಿಸಿದಾಗ ಮಹಮ್ಮದ್ ರಫೀಕ್ ಎಂಬವರು ಉಡುಪಿ ಕಡೆಯಿಂದ ಶಿವಮೊಗ್ಗ ಕಡೆಗೆ ಚಲಾಯಿಸಿಕೊಂಡು ಬಂದ ಆ್ಯಂಬುಲೆನ್ಸ್ ರಿಕ್ಷಾದ ಎಡಭಾಗಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಿಕ್ಷಾ ಮತ್ತು ಆ್ಯಂಬುಲೆನ್ಸ್ ಪಲ್ಟಿಯಾಗಿದ್ದು, ಆ್ಯಂಬುಲೆನ್ಸ್‌ನಲ್ಲಿದ್ದ ಸಹ ಪ್ರಯಾಣಿಕ ಮಹಮ್ಮದ್ ಅಲಿ ಮತ್ತು ರಿಕ್ಷಾ ಚಾಲಕ ರಮೇಶ ಅವರು ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
































