9 ವರ್ಷದಲ್ಲಿ 24.82 ಕೋಟಿ ಜನರು ಬಡತನದಿಂದ ಪಾರು

ಹೊಸದಿಲ್ಲಿ : ಕಳೆದ 9 ವರ್ಷಗಳಲ್ಲಿ 24.82 ಕೋಟಿ ಜನರು ಬಡತನ ರೇಖೇಯಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. 2022ರಿಂದ 23ರ ನಡುವೆ 24.82 ಕೋಟಿ ಜನರು ಬಡತನದ ಬೇಗೆಯಿಂದ ಪಾರಾಗಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಬಡತನದಿಂದ ಪಾರಾದವರ ಸಂಖ್ಯೆ ಗಣನೀಯವಾಗಿದೆ ಎಂದು ವರದಿ ಹೇಳಿದೆ.
2013-14ರಲ್ಲಿ 29.17 ಇದ್ದ ಬಹುವಿಧ ಬಡತನದ ಪ್ರಮಾಣ 2022-23ಕ್ಕಾಗುವಾಗ ಶೇ.11.28ಕ್ಕೆ ಕುಸಿದಿದೆ. ಒಟ್ಟಾರೆ ಬಡತನ ಪ್ರಮಾಣದಲ್ಲಿ ಶೇ.11.89 ಇಳಿಮುಖವಾಗಿದೆ.
ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇದು ಬಹಳ ಉತ್ತೇಜನಾದಾಯಕವಾಗಿದ್ದು, ಸಮಗ್ರ ಅಭಿವೃದ್ಧಿ ಮತ್ತು ದೇಶದ ಆರ್ಥಿಕತೆಯನ್ನು ಬದಲಾಯಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜನರ ಸರ್ವಾಂಗೀಣ ಕಲ್ಯಾಣಕ್ಕೆ ಮತ್ತು ಸಮೃದ್ಧಿಗೆ ಇನ್ನಷ್ಟು ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಆರೋಗ್ಯ, ಶಿಕ್ಷಣ ಮತ್ತು ಜೀವನದ ಗುಣಮಟ್ಟವನ್ನು ಆಧಾರವಾಗಿಟ್ಟುಕೊಂಡು ಬಡತನವನ್ನು ಅಳೆಯಲಾಗಿದ್ದು, ಇದರಲ್ಲಿ ದೇಶ ಗಣನೀಯ ಪ್ರಗತಿ ಸಾಧಿಸಿದೆ ಎಂದು ಈ ವರದಿ ತಿಳಿಸುತ್ತದೆ. 12 ಸುಸ್ಥಿರ ಅಂಶಗಳನ್ನು ಪರಿಗಣಿಸಿ ಈ ವರದಿಯನ್ನು ತಯಾರಿಸಲಾಗಿದೆ. ಪೌಷ್ಟಿಕತೆ, ಶಿಶು ಮತ್ತು ನವಜಾತ ಶಿಶುಮರಣ, ಬಾಣಂತಿಯರ ಆರೋಗ್ಯ, ಕಲಿಕೆಯ ವರ್ಷಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್‌, ವಸತಿ, ಸಂಪತ್ತು ಮತ್ತು ಬ್ಯಾಂಕ್‌ ಖಾತೆ ಇವಿಷ್ಟು ಮೂಲಸೌಲಭ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಅಂಕಿಅಂಶಗಳ ಪ್ರಕಾರ ಪ್ರತಿವರ್ಷ 2.75 ಕೋಟಿ ಜನರು ಬಡತನ ರೇಖೆಯಿಂದ ಪಾರಾದಂತಾಗಿದೆ. ಬಹುವಿಧ ಬಡತನವನ್ನು ಶೇ.1ಕ್ಕಿಳಿಸುವುದು ಸರಕಾರದ ಗುರಿ ಎಂದು ನೀತಿ ಆಯೋಗದ ಸದಸ್ಯ ರಮೇಶ್‌ ಚಂದ್‌ ಹೇಳಿದ್ದಾರೆ.





























































































































error: Content is protected !!
Scroll to Top