ಆನೆಗುಂದಿ, ಅರೆಮಾದನಹಳ್ಳಿ ಶ್ರೀಗಳ ಉಪಸ್ಥಿತಿ
ಕಾರ್ಕಳ : ವಿಶ್ವಕರ್ಮ ಯುವ ಮಿಲನ ಸಂಘಟನೆಯ ವಿಶ್ವಕರ್ಮ ಯಜ್ಞ – ಯುವ ಸಮಾವೇಶ ಸಮಿತಿಯ ನೇತೃತ್ವದಲ್ಲಿ, ವಿಶ್ವಕರ್ಮ ಯುವ ಮಿಲನ ಆಶ್ರಯದಲ್ಲಿ ವಿಶ್ವಬ್ರಾಹ್ಮಣ ಸಮಾಜದ ಅಭಿವೃದ್ಧಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ವಿಶ್ವಕರ್ಮ ಮಹಾ ಯಜ್ಞ ಹಾಗೂ ಸಮಾಜದ ಸಂಘಟನೆಗಾಗಿ ವಿಶ್ವಕರ್ಮ ಯುವ ಸಮಾವೇಶ ಜ.28ರಂದು ಮಂಗಳೂರಿನ ಬಂಗ್ರಕೂಳೂರಿನಲ್ಲಿರುವ
ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನೆರವೇರಲಿದೆ.
ಜಗದ್ಗುರು ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ, ಪಡುಕುತ್ಯಾರು ಪೀಠಾಧೀಶ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹಾಗೂ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ಅರೆಮಾದನಹಳ್ಳಿ ಇಲ್ಲಿಯ ಪೀಠಾಧಿಪತಿ ಪರಮಪೂಜ್ಯ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ
ನಡೆಯಲಿದೆ.
ಬೆಳಗ್ಗೆ 6.30ರಿಂದ ವಿಶ್ವಕರ್ಮ ಮಹಾ ಯಜ್ಞ ಪ್ರಾರಂಭವಾಗಲಿದೆ. ವೈವಿಧ್ಯಮಯ ನೃತ್ಯ ಸ್ಪರ್ಧೆ ವಿಶ್ವಕರ್ಮ ಕಲಾ ಸಂಭ್ರಮ ಹಾಗೂ
ವಸ್ತು ಪ್ರದರ್ಶನ ವಿಶ್ವಕರ್ಮ ಕಲಾ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 10.30ರಿಂದ ಸಮಾಜದ ಸಂಘಟನೆಗಾಗಿ ಹಾಗೂ ಅಮರ ಶಿಲ್ಪಿ ಜಕಾಣಾಚಾರ್ಯ ವೇದಿಕೆಯಲ್ಲಿ ವಿಶ್ವಕರ್ಮ ಯುವ ಸಮಾವೇಶ ಸಮಾಜದ, ರಾಜ್ಯದ, ರಾಷ್ಟ್ರದ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ ಎಂದು ವಿಶ್ವಕರ್ಮ ಯುವ ಮಿಲನ್ನ ರಾಜ್ಯಾಧ್ಯಕ್ಷ ವಿಕ್ರಮ್ ಐ. ಆಚಾರ್ಯ ಹಾಗೂ ವಿಶ್ವಕರ್ಮ ಯಜ್ಞ ಯುವ ಸಮಾವೇಶ ಸಮಿತಿಯ ಅಧ್ಯಕ್ಷ ನಾಗರಾಜ್ ಆಚಾರ್ಯ ಮಂಗಳಾದೇವಿ, ಪ್ರಧಾನ ಕಾರ್ಯದರ್ಶಿ ಸುಂದರ ಆಚಾರ್ಯ ಮರೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






























































