ಬಾಂಬ್ ಸ್ಫೋಟಕ್ಕೆ ತಯಾರಿ ನಡೆಸಿದ್ದ ಭಯೋತ್ಪಾದಕರು
ಬಳ್ಳಾರಿ : ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ ಬಳ್ಳಾರಿ ನಗರದ ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್ ಮತ್ತು ಸೈಯದ್ ಸಮೀರ್ ಎಂಬಿಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ.
ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಎನ್‌ಐಎ ದಾಳಿ ನಡೆಸಿ ಸುಧಾರಿತ ಸ್ಫೋಟಕಗಳನ್ನು ಬಳಸಿ ವಿಧ್ವಂಸಕ ಕೃತ್ಯ ನಡೆಸಲು ಮಾಡಿದ್ದ ಸಂಚಿನಲ್ಲಿ ಭಾಗಿಯಾದವರನ್ನು ಬಂಧಿಸಿದೆ. ಒಟ್ಟಾರೆ ನಿಷೇಧಿತ ಭಯೋತ್ಪಾದಕ ಸಂಘಟನೆಯ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಈ ಉಗ್ರ ಸಂಘಟನೆಯ ಮುಖ್ಯಸ್ಥ ಬಳ್ಳಾರಿ ಮೂಲದ ಮಿನಾಝ್ ಅಲಿಯಾಸ್ ಎಂಡಿ ಸುಲೈಮಾನ್ ಎಂದು ತಿಳಿದುಬಂದಿದೆ.
ಎನ್‌ಐಎ ನಿನ್ನೆ ಬಳ್ಳಾರಿ ಮತ್ತು ಬೆಂಗಳೂರು ಸೇರಿದಂತೆ 19 ಸ್ಥಳಗಳ ಮೇಲೆ ದಾಳಿ ನಡೆಸಿವೆ. ಮಹಾರಾಷ್ಟ್ರದ ಅಮರಾವತಿ, ಮುಂಬಯಿ ಮತ್ತು ಪುಣೆ, ಜಾರ್ಖಂಡ್‌ನ ಜಮ್ಶೆಡ್‌ಪುರ ಮತ್ತು ಬೊಕಾರೊ ಮತ್ತು ದೆಹಲಿಯಲ್ಲಿ ಏಕಕಾಲದಲ್ಲಿ ಈ ದಾಳಿಗಳು ನಡೆದಿವೆ.
ಟು ಶಂಕಿತ ಉಗ್ರರು ಐಸಿಸ್‌ನ ಭಯೋತ್ಪಾದನೆ ಸಂಘಟನೆಯ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆರೋಪಿಗಳು ಸ್ಫೋಟಕದಿಂದ ಬಾಂಬ್ ತಯಾರಿಸಲು ತಯಾರಿ ನಡೆಸಿದ್ದರು. ಬಾಂಬ್ ತಯಾರಿಉಗೆ ಬಳಸುವ ಹಲವು ವಸ್ತುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.
ಬಳ್ಳಾರಿಯ ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್ ಮತ್ತು ಸೈಯದ್ ಸಮೀರ್, ಬೆಂಗಳೂರಿನ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ ಅಲಿಯಾಸದ ಸಮಿ, ಎಂಡಿ ಮುಝಮ್ಮಿಲ್, ಮುಂಬೈನ ಅನಾಸ್ ಇಕ್ಬಾಲ್ ಶೇಖ್, ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೇನ್ ಮತ್ತು ಜಾರ್ಖಂಡ್‌ನ ಎಂಡಿ ಶಹಬಾಜ್ ಅವರನ್ನು ಬಂಧಿಸಲಾಗಿದೆ. ಈ ಎನ್‌ಐಎ ಕಾರ್ಯಚರಣೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ,ಜಾರ್ಖಂಡ್ ಮತ್ತು ದೆಹಲಿ ಪೊಲೀಸರು ಭಾಗವಹಿಸಿದ್ದರು.






































































