ಚಳಿಗಾಲದಲ್ಲಿ ಹೇರಳವಾಗಿ ದೊರೆಯುವ ಪೇರಳೆ ಹಣ್ಣನ್ನು ಸೇವಿಸುವುದರಿಂದ ಅನೇಕ ಲಾಭಗಳಿವೆ. ಪೋಷಕಾಂಶಗಳ ಜೊತೆಗೆ ಅನೇಕ ಕಾಯಿಲೆಗಳನ್ನು ದೂರ ಮಾಡುವ ಗುಣ ಇದಕ್ಕಿದೆ. ಹಣ್ಣು ಮಾತ್ರವಲ್ಲದೆ ಮರದ ತೊಗಟೆ, ಹೂವು, ಎಲೆಯು ಕೂಡ ಆಯುರ್ವೇದದಲ್ಲಿ ಉಪಯೋಗಿಸುತ್ತಾರೆ. ಸಂಸ್ಕೃತದಲ್ಲಿ ಇದನ್ನು ಪೇರುಕ, ಅಮೃತ ಫಲ, ಬಹುಬೀಜ ಇನ್ನಿತರ ಹೆಸರುಗಳಿಂದ ಕರೆಯುತ್ತಾರೆ.
ಪೇರಳೆ ಹಣ್ಣಿನ ಗುಣಗಳು
ರುಚಿಯಲ್ಲಿ ಖಾರ, ಲಘು (ಬೇಗ ಜೀರ್ಣವಾಗುವಂಥದ್ದು) ಹಾಗೂ ಶುಷ್ಕ ಗುಣ ಹೊಂದಿದೆ. ಸ್ವಭಾವದಲ್ಲಿ ಉಷ್ಣ ವೀರ್ಯ. ಕಫ ದೋಷವನ್ನು ಸಮತೋಲನದಲ್ಲಿಡುತ್ತದೆ.
ಹಣ್ಣು ಸೇವಿಸುವುದರಿಂದ ಆರೋಗ್ಯ ಲಾಭಗಳು :
-ಬೊಜ್ಜನ್ನು ಕರಗಿಸುತ್ತದೆ.
-ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇಡುತ್ತದೆ.
-ಹೃದಯಕ್ಕೆ ಒಳ್ಳೆಯದು.
-ಹಣ್ಣಿನ ಫೇಸ್ ಪ್ಯಾಕ್ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
-ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು.
-ಮಲಬದ್ಧತೆಯನ್ನು ನಿವಾರಿಸುತ್ತದೆ.
-ಪೈಲ್ಸ್ ಸಮಸ್ಯೆಯನ್ನು ದೂರ ಮಾಡುತ್ತದೆ.
-ಕಣ್ಣಿಗೆ ಒಳ್ಳೆಯದು.
-ಅತಿಸಾರವನ್ನು ನಿಯಂತ್ರಿಸುತ್ತದೆ.
-ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.
-ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಎಲೆಯ ಉಪಯೋಗಳು
ಎಲೆಯ ಕಷಾಯ ಕೂದಲಿಗೆ ಹಚ್ಚುವುದರಿಂದ ಕೂದಲು ಸಂಪಾಗಿ ಬೆಳೆಯುತ್ತದೆ. ಒಂದು ಬೌಲ್ ನೀರಿಗೆ 5 ರಿಂದ 6 ಎಲೆಯ ತುಂಡನ್ನು ಹಾಕಿ ಐದು ನಿಮಿಷ ಕುದಿಸಿ ಸೋಸಿ ಈ ನೀರನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸಂಪಾಗಿ ಬೆಳೆಯುತ್ತದೆ.
ಎಲೆಯ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ದೂರವಾಗುವುದಲ್ಲದೆ ಕಲೆಯ ನಿವಾರಣೆ ಕೂಡ ಆಗುತ್ತದೆ.
ಎಲೆಯ ಪೇಸ್ಟ್ ಅನ್ನು ಕಾಲು ಗಂಟುಗಳಿಗೆ ಹಚ್ಚುವುದರಿಂದ ಕೀಲು ನೋವು ಕಮ್ಮಿಯಾಗುತ್ತದೆ.
ಮರದ ತೊಗಟೆಯಿಂದ ಆಗುವ ಲಾಭಗಳು
-ನೆಗಡಿ, ಕೆಮ್ಮು ಹಾಗೂ ಸೈನಸ್ ದೂರ ಮಾಡುತ್ತದೆ.
-ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು.
-ಚಕ್ಕೆ ಚೂರ್ಣವನ್ನು ಗಾಯ ಹಾಗೂ ವ್ರಣದ ಮೇಲೆ ಲೇಪನೆ ಮಾಡುವುದರಿಂದ ಬೇಗ ಗುಣವಾಗುತ್ತದೆ.
-ಮೂತ್ರಕೋಶದ ಇನ್ಫೆಕ್ಷನ್ ಗಳಲ್ಲಿ ಉಪಯುಕ್ತ.
-ಅಜೀರ್ಣದ ಸಮಸ್ಯೆಯನ್ನು ನಿವಾರಿಸುತ್ತದೆ.
ಕಷಾಯ ಮಾಡುವ ವಿಧಾನ 200 ml ನೀರಿಗೆ ಮೂರ್ನಾಲ್ಕು ಚೆಕ್ಕೆ ತುಂಡುಗಳನ್ನು ಹಾಕಿ ಕಾಲು ಭಾಗ ಬರುವವರೆಗೆ ಕುದಿಸಿ ಸೋಸಿ ಸೇವಿಸಿರಿ. ಕಷಾಯ ಸೇವಿಸುವ ಪ್ರಮಾಣ 30 ರಿಂದ 40 ml .
ಚೂರ್ಣದ ಪ್ರಮಾಣ ಮೂರರಿಂದ ಐದು ಗ್ರಾಂ.


































