ನಿಟ್ಟೆ : ಕ್ರಶರ್‌ನಲ್ಲಿ ಕಳವು – ನಾಲ್ವರ ವಿರುದ್ಧ ದೂರು ದಾಖಲು

ಕಾರ್ಕಳ : ನಿಟ್ಟೆ ಗ್ರಾಮದ ಗುಂಡ್ಯಡ್ಕದಲ್ಲಿರುವ ಶ್ರೀ ಮಹಾಗಣಪತಿ ಕ್ರಶರ್‌ನಲ್ಲಿ ಕಳ್ಳತನ ನಡೆದ ಕುರಿತು ಜಯಂತ್‌ ಕುಕ್ಕುಂದೂರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ. 13 ರಂದು ರಾತ್ರಿ 10.30ರ ಸುಮಾರಿಗೆ ಆರೋಪಿಗಳಾದ ಸಂದೀಪ್‌, ದೀಪಕ್‌, ಸಂಕೇತ್‌ ಹಾಗೂ ರಕ್ಷಣ್ ಬೈಕ್‌ನಲ್ಲಿ ಬಂದು ಕ್ರಶರ್‌ನಲ್ಲಿರುವ 37,500 ರೂ. ಮೌಲ್ಯದ ಕಬ್ಬಿಣದ ಜಾಬ್‌ ಪ್ಲೇಟ್‌, ಹಳೆ ಬ್ಯಾಟರಿ, ಕಬ್ಬಿಣದ ಬ್ರೇಕರ್‌ ಸೀಜರ್‌ರನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.







































































error: Content is protected !!
Scroll to Top