ಕಾರ್ಕಳ : 800 ವರ್ಷಗಳ ಇತಿಹಾಸವಿರುವ ಎಣ್ಣೆಹೊಳೆ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ನ. 24 ರಂದು ಮುಷ್ಠಿಕಾಣಿಕೆ ಸಮರ್ಪಣೆ ನಡೆಯಲಿದೆ.
1989ರಲ್ಲಿ ದೇವಸ್ಥಾನದಲ್ಲಿ ಜೀರ್ಣೊದ್ಧಾರ ಕಾರ್ಯಗಳಾಗಿ ಬ್ರಹ್ಮಕಲಶೋತ್ಸವ ಜರುಗಿತ್ತು. ಇದೀಗ ದೇವಸ್ಥಾನದಲ್ಲಿ ಕೆಲವೊಂದು ದುರಸ್ತಿ ಕಾರ್ಯಗಳು ನಡೆಯಲಿದ್ದು, ಅದರೊಂದಿಗೆ ಬ್ರಹ್ಮಕಲಶೋತ್ಸವ ನಡೆಸುವುದಾಗಿ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಗ್ರಾಮಸ್ಥರು ತೀರ್ಮಾನಿಸುತ್ತಾರೆ. ಈ ನಿಟ್ಟಿನಲ್ಲಿ ನ. 24 ರಂದು ಮುಷ್ಠಿಕಾಣಿಕೆ ಸಮರ್ಪಣೆಯಾಗಲಿದೆ.
ನ. 24ರ ಬೆಳಿಗ್ಗೆ 9.30 ಗಂಟೆಗೆ ವೇದಮೂರ್ತಿ ವಿದ್ವಾನ್ ಅರುಣ್ ಜೆ. ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಮುಂಬಯಿ ಪೊಲೀಸ್ ಅಧಿಕಾರಿ ದಯಾ ನಾಯಕ್, ಮುಂಬಯಿ ಹೊಟೇಲ್ ಉದ್ಯಮಿ ವಿಠ್ಠಲ್ ಶೆಟ್ಟಿ, ಸಾಧು ಟಿ. ಶೆಟ್ಟಿ, ರಾಜೇಂದ್ರ ಎಸ್. ಶೆಟ್ಟಿ, ಗಿರೀಶ್ ಶೆಟ್ಟಿ ನೆರೂಲ್, ಜಯಶೀಲ ಶೆಟ್ಟಿ ಎಣ್ಣೆಹೊಳೆ, ವಿಶ್ವನಾಥ್ ಶೆಟ್ಟಿ ಪೂನಾ, ಜಗನ್ನಾಥ್ ಕೆ. ಶೆಟ್ಟಿ ಎಣ್ಣೆಹೊಳೆ, ಸತೀಶ್ ಶೆಟ್ಟಿ ಮುಂಬಯಿ, ಸುರೇಂದ್ರ ಶೆಟ್ಟಿ ಕೆಂಜಿಲ ಮುಂಬಯಿ, ದಿವಾಕರ ಶೆಟ್ಟಿ ಕೆಂಜಿಲ ಎಣ್ಣೆಹೊಳೆ, ಜಯರಾಮ ಶೆಟ್ಟಿ ಕೇದಿಗೆ ಬೈಲು ವಾಶಿ, ಕರುಣಾಕರ ಶೆಟ್ಟಿ ಕೇದಿಗೆ ಬೈಲು, ಜಗದೀಶ್ ಶೆಟ್ಟಿ ಎಣ್ಣೆಹೊಳೆ, ಉಮೇಶ್ ಶೆಟ್ಟಿ ಎಣ್ಣೆಹೊಳೆ, ರತ್ನಾಕರ್ ಶೆಟ್ಟಿ ಎಣ್ಣೆಹೊಳೆ, ನಾಗೇಶ್ ಶೆಟ್ಟಿ ಪೂನಾ, ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮುಷ್ಠಿಕಾಣಿಕೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ನ. 24 : ಎಣ್ಣೆಹೊಳೆ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಮುಷ್ಠಿಕಾಣಿಕೆ
