ಮೂಡುಬಿದಿರೆ : ಪಾಲಡ್ಕದ ಸೈಂಟ್ ಇಗ್ನೇಷೀಯಸ್ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎಕ್ಸಲೆಂಟ್ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ಜಾನಪದಗೀತೆ- ಮೌಲ್ಯ ವೈ. ಆರ್. ಜೈನ್, ಇಂಗ್ಲೀಷ್ ಭಾಷಣ- ಸುಧಾಶ್ರೀ, ಸಂಸ್ಕೃತ ಭಾಷಣ- ಆದಿತ್ಯ, ಸಂಸ್ಕೃತ ಧಾರ್ಮಿಕ ಪಠಣ–ವೀಕ್ಷಾ ನಾಯಕ್ ಹಾಗೂ ಗುಂಪು ಸ್ಪರ್ಧೆ – ಕವ್ವಾಲಿಯಲ್ಲಿ ವಿದ್ಯಾರ್ಥಿಗಳಾದ ಅನಘಾ ಕಾಮತ್, ಕೃತಿಕಾ ಕಾಮತ್, ದಿವಿಜೇಶ್, ಸುಮಾ ಪೈ, ಅಮೂಲ್ಯ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡ ಭಾಷಣ – ಸಾನಿಧ್ಯ (ದ್ವಿತೀಯ ), ಹಿಂದಿ ಭಾಷಣ –ಅಲ್ಸಿಯಾ (ತೃತೀಯ) ಲಘು ಸಂಗೀತ –ಆಯುಷ್ (ದ್ವಿತೀಯ)ಚರ್ಚಾ ಸ್ಪರ್ಧೆ- ದೀಕ್ಷಾ (ದ್ವಿತೀಯ) ಗಜಲ್-ಆದೀಶ್(ತೃತೀಯ) ಕ್ವಿಜ್- ಪ್ರತೀಶ್ ಗೌಡ, ವಿನಯ್ ಶಂಕರ್ ದ್ವಿತೀಯ ಸ್ಥಾನಗಳನ್ನು ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.


























