ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ : ಹಮಾಸ್‌ ಕಮಾಂಡರ್‌ ಹತ್ಯೆ

ಭೀಕರ ದಾಳಿಯಲ್ಲಿ 50ಕ್ಕೂ ಅಧಿಕ ಪ್ಯಾಲೆಸ್ತೀನಿಯರ ಸಾವು

ಟೆಲ್‌ ಅವೀವ್‌: ಗಾಜಾಪಟ್ಟಿಯ ಅತಿದೊಡ್ಡ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ಸೇನೆ ಬುಧವಾರ ಭೀಕರ ದಾಳಿ ನಡೆಸಿದೆ. ಇಸ್ರೇಲ್‌ ನಡೆಸಿದ ವಾಯು ದಾಳಿಯಲ್ಲಿ ಹಮಾಸ್‌ ಉಗ್ರರ ಟಾಪ್‌ ಕಮಾಂಡರ್‌ ಇಬ್ರಾಹಿಂ ಬ್ಯಾರಿ ಹತ್ಯೆಗೀಡಾಗಿದ್ದೇನೆ. ಇಸ್ರೇಲ್‌ ಮೇಲೆ ನಡೆದ ಅಕ್ಟೋಬರ್ 7ರ ಹಮಾಸ್‌ ದಾಳಿಗೆ ಈತನೇ ಪ್ರಮುಖ ರೂವಾರಿಯಾಗಿದ್ದ.
ಇಸ್ರೇಲ್‌ ನಡೆಸಿದ ಈ ದಾಳಿಯಲ್ಲಿ ಅಲ್ ಜಜೀರಾ ಕುಟುಂಬದ 19 ಮಂದಿ, ಸುಮಾರು 50 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಅಲ್ ಜಜೀರಾ ಈ ದಾಳಿಯನ್ನು ಖಂಡಿಸಿದೆ.
ನಿರಾಶ್ರಿತರ ಶಿಬಿರದಲ್ಲಿ ಅಡಗಿಕೊಂಡಿದ್ದ ಬ್ಯಾರಿಯನ್ನು ತೊಡೆದು ಹಾಕಲು ಶಿಬಿರವನ್ನು ಧ್ವಂಸ ಮಾಡಿರುವುದಾಗಿ ಇಸ್ರೇಲ್‌ನ ರಕ್ಷಣಾ ಪಡೆ ತಿಳಿಸಿದೆ. ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಸ್ವಯಂಸೇವಕರು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆ ದೇಹಗಳು ಮತ್ತು ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಕನಿಷ್ಠ 47 ಮೃತ ದೇಹಗಳು ಪತ್ತೆಯಾಗಿವೆ.
ಸ್ವಲ್ಪ ಸಮಯದ ಹಿಂದೆ ಐಡಿಎಫ್‌ ಯುದ್ಧವಿಮಾನಗಳು ಹಮಾಸ್ ಭಯೋತ್ಪಾದಕ ಸಂಘಟನೆಯ ಜಬಾಲಿಯಾ ಬ್ರಿಗೇಡ್‌ನ ಕಮಾಂಡರ್ ಇಬ್ರಾಹಿಂ ಬ್ಯಾರಿಯನ್ನು ಹತ್ಯೆ ಮಾಡಿತು. ಆತ ಅಕ್ಟೋಬರ್ 7ರಂದು ಮಾರಕ ಭಯೋತ್ಪಾದಕ ದಾಳಿಯನ್ನು ನಿರ್ದೇಶಿಸಿದವರಲ್ಲಿ ಒಬ್ಬನಾಗಿದ್ದ ಎಂದು ಇಸ್ರೇಲಿ ಸೇನೆ ತಿಳಿಸಿದೆ.
ಈಗಾಗಲೇ ಇಸ್ರೇಲ್ ಗಾಜಾ ನಿವಾಸಿಗಳಿಗೆ ಪ್ರದೇಶವನ್ನು ತೊರೆಯುವಂತೆ ಎಚ್ಚರಿಕೆ ನೀಡಿದೆ. ಆದರೆ ಕೆಲವು ಕುಟುಂಬಗಳು ಉಳಿದುಕೊಂಡಿವೆ.









































































































error: Content is protected !!
Scroll to Top