ಬೈಲೂರು ಪರಿಸರದಲ್ಲಿ ಚಿರತೆ – ಆತಂಕದಲ್ಲಿ ಜನತೆ

ಬೈಲೂರು : ಬೈಲೂರು ಗ್ರಾ. ಪಂ. ವ್ಯಾಪ್ತಿಯ ಕೌಡೂರು, ಬಾಣಾಲು, ಮಾಯಾಡಿ, ಮುಲ್ಲಡ್ಕ, ಶೇರಿಗಾರ ಬೆಟ್ಟು ಮತ್ತು ಮಾಣಿಕುಮೇರಿ ಪರಿಸರದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಮಿತಿ ಮೀರಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ರಾತ್ರಿ ಸಮಯದಲ್ಲಿ ಚಿರತೆ ನಾಯಿಗಳನ್ನು, ಕೋಳಿಗಳನ್ನು ಭೇಟೆಯಾಡುವುದು ಸಾಮಾನ್ಯವಾಗಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಗ್ರಾಮಸ್ಥರಾದ ಬಿಜೆಪಿ ವಾರ್ಡ್‌ ಅಧ್ಯಕ್ಷ ಕಿಶೋರ್‌ ಶೆಟ್ಟಿ ಮತ್ತು ರಂಜಿತ್‌ ಶೆಟ್ಟಿ ಕೌಡೂರು ದೂರು ನೀಡಿದ್ದು, ಅರಣ್ಯ ಇಲಾಖೆಯು ಕಾರ್ಯಪ್ರವೃತ್ತವಾಗಿದೆ.

ಅರಣ್ಯ ಇಲಾಖೆಯಿಂದ ಸ್ಪಂದನೆ
ಪ್ರಸ್ತುತ ಚಿರತೆ ಹಾವಳಿಯಿರುವ ಪರಿಸರ ರಾಜೀವ ನಗರ ಬಾರೆಜಡ್ಡು ಎಂಬಲ್ಲಿ ಒಂದು ಬೋನ್‌ನ್ನು ಇರಿಸಲಾಗಿದ್ದು, ಗ್ರಾಮಸ್ಥರ ಬೇಡಿಕೆಯ ಮೇರೆಗೆ ಇನ್ನೊಂದು ಬೋನ್‌ನ್ನು ಕೌಡೂರು ಮಾಣಿಕುಮೇರಿ ಬಳಿ ಇರಿಸಲಾಗುವುದು ಎಂದು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಜಯರಾಮ್‌ ತಿಳಿಸಿರುತ್ತಾರೆ.

ಹೆಚ್ಚುತ್ತಿರುವ ಚಿರತೆ ಕಾಟ
ತಾಲೂಕಿನೆಲ್ಲೆಡೆ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲ ತಿಂಗಳ ಹಿಂದೆ ಸಾಣೂರು ಪರಿಸರದಲ್ಲಿ ಚಿರತೆ ಪತ್ತೆಯಾಗಿತ್ತು. ಇಲ್ಲಿನ ಮುದ್ದಣ ನಗರ ಶಾಲಾ ಬಳಿ ಚಿರತೆಗಳೆರಡು ಕಾಳಗ ನಡೆಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಳೆದ ವರ್ಷ ಕೆರ್ವಾಶೆ ಶೆಟ್ಟಿಬೆಟ್ಟು ಪರಿಸರದಲ್ಲಿ ಜಾನುವಾರೊಂದನ್ನು ಚಿರತೆ ಬಲಿ ಪಡೆದಿತ್ತು. ಮಾರ್ಚ್‌ನಲ್ಲಿ ನೀರೆ ಗ್ರಾ. ಪಂ. ನ ಬಾರೆಜಡ್ಡು ಎಂಬಲ್ಲಿ ಚಿರತೆ ದನವೊಂದನ್ನ ಬಲಿ ಪಡೆದಿತ್ತು. ಜನವರಿಯಲ್ಲಿ ಕಣಜಾರು ಪರಿಸರದಲ್ಲಿ ಓಡಾಡುತ್ತಿದ್ದ ಚಿರತೆಯನ್ನು ಬೋನು ಇರಿಸಿ ಹಿಡಿಯುವಲ್ಲಿ ಕಾರ್ಕಳ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದರು.

ಕಣಜಾರು, ಪಳ್ಳಿ, ನೀರೆ ಬೈಲೂರು, ಕಾಂತಾವರ, ಬೆಳ್ಮಣ್‌, ಮುಡಾರು, ಮುಂಡ್ಲಿ, ಹೆಬ್ರಿ ತಾಲೂಕಿನ ವರಂಗ, ಮುನಿಯಾಲು, ಅಂಡಾರು ಪರಿಸರದಲ್ಲಿ ಚಿರತೆಗಳು ಕಾಣಸಿಗುವುದು ಸಾಮಾನ್ಯವಾಗಿದೆ. ಜಾನುವಾರು, ನಾಯಿಗಳ ಬೇಟೆಗಾಗಿ ಚಿರತೆಗಳು ಕಾಡಿನಿಂದ ನಾಡಿನತ್ತ ಬರುತ್ತಿದೆ. ಇದರಿಂದ ಜನತೆ ಹೊರಬರಲು ಭಯಪಡುತ್ತಿದ್ದಾರೆ.



































































































error: Content is protected !!
Scroll to Top