ಕಾರ್ಕಳ : ಕುಕ್ಕುಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಶರಮಾರ್ ಎಂಬಲ್ಲಿನ ವಾಸದ ಮನೆಗೆ ಅ. 24 ರಂದು ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಪಡೆದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಪರಿಣಾಮಕ್ಕೆ ಬಟ್ಟೆಗಳು ಸೇರಿದಂತೆ ಮನೆಯ ಪರಿಕರಗಳು ಸುಟ್ಟು ಹೋಗಿದೆ. ವಿದ್ಯುತ್ ಶಾಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎನ್ನಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಿಬ್ಬಂದಿ ಅಚ್ಚುತ ಕರ್ಕೇರ, ರೂಪೇಶ್, ಜಯಮೂಲ್ಯ, ಸುಜಯ್, ವಿನಾಯಕ್ ಪಾಲ್ಗೊಂಡಿದ್ದರು.
ಕುಕ್ಕುಜೆ : ಮನೆಗೆ ಅಗ್ನಿ ಅವಘಡ – ತಪ್ಪಿದ ಅನಾಹುತ






























































