ರೋಟರಿ ಕ್ಲಬ್ ಕಾರ್ಕಳ ವಜ್ರಮಹೋತ್ಸವ – ನ. 19 ರಂದು ದೀಪಾವಳಿ ಗೂಡುದೀಪ ಸ್ಪರ್ಧೆ

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಇದರ ವಜ್ರಮಹೋತ್ಸವದ ಪ್ರಯುಕ್ತ ದೀಪಾವಳಿ ಗೂಡುದೀಪ ಸ್ಪರ್ಧೆಯನ್ನು ನವೆಂಬರ್ 19 ರಂದು ಸಂಜೆ ‌5 ಗಂಟೆಗೆ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಎಂಬ ಎರಡು ವಿಭಾಗಳಿರಲಿದೆ. ಸಾಂಪ್ರದಾಯಿಕ ವಿಭಾಗದಲ್ಲಿ ಗೂಡು ಮತ್ತು ಬಣ್ಣದ ಕಾಗದದ ಬಳಕೆಗೆ ಮಾತ್ರ ಅವಕಾಶವಿದೆ. ಆಧುನಿಕ ವಿಭಾಗದಲ್ಲಿ ಹೂ, ಎಲೆ, ಗರಿ, ಗಾಜು, ಪೇಪರ್, ನವದಾನ್ಯ ಇತ್ಯಾದಿಗಳನ್ನು ಬಳಸಿ ಗೂಡುದೀಪ ತಯಾರಿಸಬಹುದು.

ಸ್ಥಳೀಯ ಸ್ಪರ್ಧಿಗಳಿಗೆ ಪ್ರತೇಕ ವಿಭಾಗ
ಕಾರ್ಕಳದ ಸ್ಥಳೀಯರಿಗೆ ಗೂಡುದೀಪ ತಯಾರಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಪ್ರತೇಕ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಗುರುತು ಚೀಟಿ ಕಡ್ಡಾಯವಾಗಿದೆ.
ಪ್ರತಿ ವಿಭಾಗದ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಮತ್ತು ಸಮಾಧಾನಕರ ಬಹುಮಾನ ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ರೋಟರಿ ಕ್ಲಬ್ ಅದ್ಯಕ್ಷ ಜಾನ್ ಆರ್ ಡಿ’ ಸಿಲ್ವ ಹಾಗೂ ಸ್ಪರ್ಧೆಯ ಸಂಯೋಜಕ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































































































































error: Content is protected !!
Scroll to Top