ಲೋಡ್‌ಶೆಡ್ಡಿಂಗ್‌ 6ನೇ ಗ್ಯಾರಂಟಿ : ಶೋಭಾ ಕರಂದ್ಲಾಜೆ

ಬಿಟ್ಟಿ ಭಾಗ್ಯಗಳಿಂದ ರಾಜ್ಯ ದಿವಾಳಿ ಎಂದು ಟೀಕೆ

ಬೆಂಗಳೂರು : ಲೋಡ್‌ಶೆಡ್ಡಿಂಗ್‌ ರಾಜ್ಯದ ಜನರಿಗೆ ಕಾಂಗ್ರೆಸ್‌ ಸರಕಾರದ ಆರನೇ ಗ್ಯಾರಂಟಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ಯೂನಿಟ್‌ ಉಚಿತ ಕೊಟ್ಟ ಸರಕಾರದ ಬಳಿ ವಿದ್ಯುತ್‌ ಖರೀದಿಸಲು ದುಡ್ಡಿಲ್ಲ, ಬಳ್ಳಾರಿ ರಾಯಚೂರು ಥರ್ಮಲ್‌ ಪವರ್‌ಗಳಿಂದ ಜೆಸ್ಕಾಂ ವಿದ್ಯುತ್‌ ಖರೀದಿಸಲು ಹಣವಿಲ್ಲ. ಇದರಿಂದ ಲೋಡ್‌ಶೆಡ್ಡಿಂಗ್‌ ಮಾಡುತ್ತಿದ್ದಾರೆ. ಕಳೆದ ತಿಂಗಳು ರಾಜ್ಯದ ನ್ಯಾಯಾಧೀಶರಿಗೆ ವಾರ ತಡ ಮಾಡಿ ಸಂಬಳ ಕೊಟ್ಟರು. ಶಿಕ್ಷಕರು ಹಾಗೂ ಇತರ ನೌಕರರಿಗೆ 20 ದಿನ ತಡವಾಗಿ ಸಂಬಳ ಕೊಟ್ಟರು. ಅಧಿಕಾರಕ್ಕೆ ಬಂದ ಐದಾರು ತಿಂಗಳಲ್ಲಿ ಸರಕಾರ ದಿವಾಳಿಯಾಗಿದೆ. ನಾಲ್ಕು ವರ್ಷಗಳಲ್ಲಿ ರಾಜ್ಯದ ಹಣಕಾಸು ಸ್ಥಿತಿ ಅಧೋಗತಿಯಾಗಲಿದೆ. ಈ ಬಗ್ಗೆ ಸರಕಾರ ಯೋಚನೆ ಮಾಡುತ್ತಿಲ್ಲ. ಕೇವಲ ಗ್ಯಾರಂಟಿ ಇಟ್ಟುಕೊಂಡು ಇಡೀ ರಾಜ್ಯವನ್ನೇ ಬರ್ಬಾದ್‌ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಪಂಚ ಭಾಗ್ಯಗಳೊಂದಿಗೆ ರಾಜ್ಯಕ್ಕೆ ಕತ್ತಲು ಭಾಗ್ಯ ಕರುಣಿಸಿದ್ದಾರೆ ಎಂದು ಟೀಕಿಸಿದರು.
ವಿದ್ಯುತ್‌ ಉತ್ಪಾದನೆ ಕುಂಠಿತಗೊಂಡ ಕಾರಣ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ಚುನಾವಣೆಯಲ್ಲಿ ರೈತರಿಗೆ 7 ತಸು ನಿರಂತರ ವಿದ್ಯುತ್‌ ಎಂದು ಹೇಳಿದ್ದ ಕಾಂಗ್ರೆಸ್‌ ಈಗ 2 ತಾಸು ವಿದ್ಯುತ್‌ ಕೊಡಲು ಹೆಣಗಾಡುತ್ತಿದೆ ಎಂದು ಟೀಕಿಸಿದ್ದಾರೆ.





























































































































error: Content is protected !!
Scroll to Top