ವಿಶ್ವಕಪ್‌ ಟೂರ್ನಿ : ನಾಳೆ ಭಾರತ-ಪಾಕಿಸ್ಥಾನ ಮುಖಾಮುಖಿ

ಬದ್ಧ ಎದುರಾಳಿಗಳ ಹೋರಾಟ ನೋಡಲು ಇಡೀ ದೇಶ ಕಾತರ

ಅಹಮದಾಬಾದ್‌ : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತ ಭಾರತ-ಪಾಕಿಸ್ಥಾನ ಮುಖಾಮುಖಿ ನಾಳೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳ ಈ ಕ್ರಿಕೆಟ್‌ ಹೋರಾಟವನ್ನು ನೋಡಲು ಕ್ರಿಕೆಟ್‌ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈ ಪಂದ್ಯದ ಎಲ್ಲ ಟಿಕೆಟ್‌ಗಳು ಈಗಾಗಲೇ ಖಾಲಿಯಾಗಿವೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ ಪಾಕಿಸ್ಥಾನ ವಿರುದ್ಧವೂ ಗೆದ್ದು ಹ್ಯಾಟ್ರಿಕ್‌ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದರೆ, ಶ್ರೀಲಂಕಾದ ವಿರುದ್ಧ ಬೆಟ್ಟದಷ್ಟು ರನ್‌ ಚೇಸ್‌ ಮಾಡಿ ಗೆದ್ದಿರುವ ಪಾಕಿಸ್ಥಾನ ಫಾರ್ಮ್‌ಗೆ ಮರಳಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಹೀಗಾಗಿ ಎರಡೂ ತಂಡಗಳು ಸಮಬಲದ ಹೋರಾಟ ನೀಡುವ ಸಾಧ್ಯತೆಯಿದೆ. ಇದು ರಣ ರೋಚಕ ಪಂದ್ಯವಾಗಲಿ ಎಂಬ ನಿರೀಕ್ಷೆ ಕ್ರಿಕೆಟ್‌ ಪ್ರೇಮಿಗಳದ್ದು.
ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಮೊದಲ ಮುಖಾಮುಖಿ ಪಂದ್ಯ ಅಕ್ಟೋಬರ್ 14ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 2ಕ್ಕೆ ಪ್ರಾರಂಭವಾಗಲಿದೆ.
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆರಂಭಿಕಾರ ಶುಭಮನ್‌ ಗಿಲ್‌ ಚೇತರಿಸಿಕೊಂಡು ನೆಟ್‌ ಪ್ರಾಕ್ಟೀಸ್‌ ಆರಂಭಿಸಿರುವುದು ಭಾರತಕ್ಕೆ ಶುಭಸೂಚನೆ. ನಾಳೆ ಅವರು ಆಡುವ ಸಾಧ್ಯತೆಯಿದೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ಪಂದ್ಯದ ನೇರ ಪ್ರಸಾರ ಇರುತ್ತದೆ.





























































































































error: Content is protected !!
Scroll to Top