ಕುಕ್ಕುಂದೂರಿನಲ್ಲಿ ವಿವಿಧ ಸಂಘ-ಸಂಸ್ಥೆಯ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ, ಪಾಂಡ್ಯನಗರಿ ಫ್ರೆಂಡ್ಸ್, ಯೂತ್ ಬಿಲ್ಲವ ಕಾರ್ಕಳ, ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು – ಮುಂಬೈ, ಮಿಯ್ಯಾರು ಮಂಡಲ ಆರ್.ಎಸ್.ಎಸ್.ಶಾಖೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಶೌರ್ಯ ವಿಪ್ಪತ್ತು ನಿರ್ವಹಣೆ ಮಿಯ್ಯಾರು ಘಟಕದವರ ಸಹಕಾರದೊಂದಿಗೆ ಗೋವಿಗಾಗಿ ಮೇವು ಕಾರ್ಯಕ್ರಮದ ಬೃಹತ್ ಅಭಿಯಾನವು ಅ. 8ರಂದು, ಕಾರ್ಕಳದ ಕುಕ್ಕುಂದೂರು ಗ್ರಾಮದ ತೋಟಗಾರಿಕೆ ಇಲಾಖೆಯಲ್ಲಿ ಮತ್ತು ಮಿಯಾರು ಗ್ರಾಮದ ಬೋರ್ಕಟ್ಟೆ ಶಾಲೆಯ ಬಳಿ ನಡೆಯಿತು. 80 ಜನರು ಅಭಿಯಾನದಲ್ಲಿ ಭಾಗವಹಿಸಿದ್ದು, 2 ಟಿಪ್ಪರ್‌ನಲ್ಲಿ ಮತ್ತು ಒಂದು ಪಿಕಪ್‌ ವಾಹನದಲ್ಲಿ ಹಸಿ ಹುಲ್ಲನ್ನು ಒಟ್ಟು ಮಾಡಿ ನೀಲಾವರ ಗೋಶಾಲೆಗೆ ಮತ್ತು ಕಾರ್ಕಳದ ನಾಗರಬಾವಿ ಗೋಶಾಲೆಗೆ ನೀಡಲಾಯಿತು.















































































error: Content is protected !!
Scroll to Top