ಕಾರ್ಕಳ : ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ನೀರೆ ಗ್ರಾಮ ಪಂಚಾಯತ್, ಮೇಲ್ಬಂಟ ಫ್ರೆಂಡ್ಸ್ ಕಣಜಾರು ಹಾಗೂ ಉಡುಪಿ ಪ್ರಸಾದ ನೇತ್ರಾಲಯ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನೀರೆ ಸಮುದಾಯ ಭವನದಲ್ಲಿ ಅ. 8ರಂದು ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವು ಜರುಗಿತು. ಶಿಬಿರದಲ್ಲಿ 152 ಜನ ಪಾಲ್ಗೊಂಡಿದ್ದು 25 ಜನರಿಗೆ ಶಸ್ತ್ರ ಚಿಕಿತ್ಸೆಗೆ ಉಚಿತವಾಗಿ ನೊಂದಣಿ ಮಾಡಲಾಯಿತು. 60 ಮಂದಿ ದೃಷ್ಟಿ ದೋಷದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಪ್ರಸಾದ ನೇತ್ರಾಲಯದ ಹಿರಿಯ ವೈದ್ಯ ಗುರುಪ್ರಸಾದ್ ಕಣ್ಣಿನ ತಪಾಸಣೆ ನಡೆಸಿದರು. ಪ್ರಸಾದ ನೇತ್ರಾಲಯದ ಕಿರಿಯ ವೈದ್ಯರು ತಪಾಸಣೆಗೆ ಸಹಕರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೀರೆ ಗ್ರಾ, ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು ನೇರವೇರಿಸಿದರು. ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹಾಂತ ಹೆಗ್ಡೆ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಆಹಾರ, ಪೋಷಣೆ, ನೇತ್ರದಾನ, ಶಿಬಿರದಲ್ಲಿ ಸಿಗುವ ಉಚಿತ ಶಸ್ತ್ರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಕಳ ತಾ. ಪಂ. ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ, ನೀರೆ ಪಂಚಾಯತ್ ಪಿಡಿಓ ಅಂಕಿತ ಅವರು ಶಿಬಿರವನ್ನು ಗ್ರಾಮೀಣ ಪ್ರದೇಶದ ಜನರಿಗೆ ಆಯೋಜನೆ ಮಾಡಿರುವ ಪ್ರಸಾದ್ ನೇತ್ರಾಲಯಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ನೀರೆ ಗ್ರಾ. ಪಂ. ಸದಸ್ಯ ಶಿವಪ್ರಸಾದ್ ರಾವ್ ಮೇಲ್ಬಂಟ ಫ್ರೆಂಡ್ಸ್ ಕಣಜಾರ್ ವತಿಯಿಂದ ಶುಭಕೋರಿದರು.

ಶಿಬಿರದಲ್ಲಿ ನೀರೆ ಗ್ರಾ. ಪಂ. ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಸದಸ್ಯರಾದ ಸತೀಶ್, ಯಶೋದಾ, ಮೇಲ್ಬಂಟ ಫ್ರೆಂಡ್ಸ್ ಅಧ್ಯಕ್ಷ ಮಹೇಶ್ ಶೆಟ್ಟಿ, ತಾ. ಪಂ. ಮಾಜಿ ಅಧ್ಯಕ್ಷ ಮಾಲಿನಿ ಜೆ. ಶೆಟ್ಟಿ, ಅರೋಗ್ಯ ಕೇಂದ್ರದ ದಾದಿಯರಾದ ಜೀನ, ಜಯಶ್ರೀ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು. ಸಂಪರ್ಕ ಅಧಿಕಾರಿ ಮೋಹನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಂಚಾಯತ್ ಸಿಬ್ಬಂದಿ ಸಾಹಿಲ್ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದರು.







































