ಚಂಡೀಗಢ : ಹಳೇ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್‌ನ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಗುರುವಾರ ಬೆಳಗ್ಗೆ ಚಂಡೀಗಢದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
2015ರಲ್ಲಿ ದಾಖಲಾಗಿರುವ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನವಾಗಿದ್ದು, ಇದು ರಾಕಜಕೀಯ ಪ್ರೇರತ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ. ಸುಖಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್‌ನ ಪೊಲೀಸರು ಜಲಾಲಾಬಾದ್‌ಗೆ ಕರೆದೊಯ್ದರು.
ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಉದ್ದೇಶಪೂರ್ವಕವಾಗಿ ಆರೋಪಿ ಮಾಡಲಾಗುತ್ತಿದೆ. ನಾನು ನಿರಪರಾಧಿ, ನನಗೆ ಸಂಬಂಧಪಟ್ಟ ಪ್ರಕರಣವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಇತ್ಯರ್ಥಗೊಳಿಸಿದೆ. ಪಂಜಾಬ್‌ನ ಎಎಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಅವರು ಖೈರಾ ಆರೋಪಿಸಿದ್ದಾರೆ.
ಈ ನಡುವೆ ತನ್ನನ್ನು ಬಂಧಿಸಲು ಬಂದ ಪೊಲೀಸರ ಜತೆ ಖೈರಾ ಜಗಳವಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ವೀಡಿಯೊದಲ್ಲಿ ಖೈರಾ ಅವರು ಪೊಲೀಸ್ ತಂಡದೊಂದಿಗೆ ತೀವ್ರ ವಾಗ್ವಾದಕ್ಕಿಳಿದ್ದಾರೆ. ಅವರು ಬಂಧನ ವಾರಂಟ್ ಅನ್ನು ಹಾಜರುಪಡಿಸುವಂತೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ. ಖೈರಾ ಅವರೇ ಫೇಸ್‌ಬುಕ್ ಲೈವ್ ಮಾಡಿ ತನ್ನ ಬಂಧನ ಪ್ರಹಸನವನ್ನು ಜನರಿಗೆ ತೋರಿಸಿದ್ದಾರೆ.
ಡ್ರಗ್ ಪ್ರಕರಣ 2015ರಲ್ಲಿ ಜಲಾಲಾಬಾದ್‌ನ ಫಾಜಿಲ್ಕಾದಲ್ಲಿ ದಾಖಲಿಸಲಾಗಿದ್ದು, ಈಗಾಗಲೇ ಲ್ಲಿ ಒಂಬತ್ತು ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚುವರಿ ಆರೋಪಿಯಾಗಿ ಸಮನ್ಸ್ ಪಡೆದ ಖೈರಾ ವಿರುದ್ಧದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿತ್ತು.
ಡ್ರಗ್ ಪ್ರಕರಣ : ಪಂಜಾಬ್‌ನ ಕಾಂಗ್ರೆಸ್ ಶಾಸಕ ಬಂಧನ
