ಮದುವೆ ಹಾಲ್‌ನಲ್ಲಿ ಭೀಕರ ಅಗ್ನಿ ಅವಘಡ : 100 ಮಂದಿ ಸಾವು

ವಧು-ವರ ಕೂಡ ಸುಟ್ಟು ಕರಕಲು

ಬಾಗ್ದಾದ್‌ : ಉತ್ತರ ಇರಾಕ್​ನ ಹಮ್ದುನಿಯಾಹ್ ಪಟ್ಟಣದಲ್ಲಿ ಮದುವೆ ಮಂಟಪದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 100ಕ್ಕೂ ಹೆಚ್ಚುಮಂದಿ ಸಾವಿಗೀಡಾಗಿ 200 ಮಂದಿ ಗಾಯಗೊಂಡಿದ್ದಾರೆ.
ಈವೆಂಟ್​ ಹಾಲ್​ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಬೆಂಕಿ ದುರಂತ ಸಂಭವಿಸಿದೆ. ಪಟಾಕಿ ಸಿಡಿಸುವಾಗ ಮದುವೆ ಮಂಟಪಕ್ಕೆ ಬೆಂಕಿ ತಗುಲಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ. ಮದುವೆ ಕಾರ್ಯಕ್ರಮದಲ್ಲಿ 700 ಮಂದಿ ಭಾಗಿಯಾಗಿದ್ದರು.
ನೆವೆಹ್ ಪ್ರಾಂತ್ಯವು ಮೊಸುಲ್‌ನ ಹೊರಗೆ ರಾಜಧಾನಿ ಬಾಗ್ದಾದ್‌ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿದೆ. ಈ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವಧು-ವರರು ಕೂಡ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಟಾಕಿ ಸುಟ್ಟಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.







































































error: Content is protected !!
Scroll to Top