ಹೆಬ್ರಿ : ಬಾವಿಗೆ ಬಿದ್ದು ವ್ಯಕ್ತಿ ಸಾವು

ಹೆಬ್ರಿ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಹೆಬ್ರಿಯ ಬೇಳಂಜೆ ಗ್ರಾಮದ ಈಶ್ವರ ನಗರ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ವಿಷ್ಣುಮೂರ್ತಿ (48) ಮೃತ ದುರ್ದೈವಿ. ರಾತ್ರಿ ಬೈಕ್‌ನಲ್ಲಿ ಬರುವಾಗ ಸ್ಕಿಡ್‌ ಆಗಿ ಬಿದ್ದು ಕೆಸರು ಮೆತ್ತಿಕೊಂಡಿತ್ತು ಹಾಗೂ ತರಚಿದ ಗಾಯವಾಗಿತ್ತು. ಮನೆಗೆ ಬಂದು ಸ್ನಾನ ಮಾಡಲೆಂದು ಹೋದಾಗ ನೀರು ಕಡಿಮೆ ಇತ್ತು. ಹೀಗಾಗಿ ಪಂಪ್‌ ಸ್ವಿಚ್‌ ಹಾಕಿದ್ದಾರೆ. ಆದರೆ ಪಂಪ್‌ನಲ್ಲಿ ನೀರು ಬಂದಿಲ್ಲ. ಏನಾಗಿದೆ ಎಂದು ಆವರಣವಿಲ್ಲದ ಬಾವಿಯ ಹತ್ತಿರ ಹೋಗಿ ಪಂಪ್‌ನ ಫುಟ್‌ಬಾಲ್‌ ಎತ್ತಿ ನೋಡಲು ಹೋದಾಗ ಕಾಲುಜಾರಿ ಬಾವಿಗೆ ಬಿದ್ದಿದ್ದಾರೆ. ರಾತ್ರಿ 2.30ಕ್ಕೆ ಅಗ್ನಿಶಾಮಕ ದಳದವರು ಬಂದು ಮೇಲೆತ್ತಿದಾಗ ವಿಷ್ಣುಮೂರ್ತಿ ಕೊನೆಯುಸಿರೆಳೆದಾಗಿತ್ತು. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















































\















error: Content is protected !!
Scroll to Top