ಹೆಬ್ರಿ ಕಾಲೇಜಿನಲ್ಲಿ ಕಳ್ಳತನಕ್ಕೆ ಯತ್ನ

ಹೆಬ್ರಿ : ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಸೆ. 6 ಸಂಜೆ ಮತ್ತು ಸೆ. 7 ಬೆಳಗ್ಗಿನ ಮಧ್ಯಾವಧಿಯಲ್ಲಿ ಸಂಭವಿಸಿದೆ. ಕಾಲೇಜಿನ ಹಿಂಬದಿ ಗೇಟ್‌ಗೆ ಹಾಕಿದ್ದ ಬೀಗವನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಕಚೇರಿಯ ಬಾಗಿಲಿನ ಬೀಗವನ್ನು ಮುರಿದು ಕೊಠಡಿಯ ಒಳಗೆ ಹೋಗಿದ್ದು, ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅವರಿಗೆ ಯಾವುದೇ ಅಮೂಲ್ಯ ವಸ್ತುಗಳು ಸಿಗದ ಕಾರಣ ಕಳ್ಳತನಕ್ಕೆ ಯತ್ನಿಸಿ ಹಿಂದಿರುಗಿದ್ದಾರೆ. ಈ ಕುರಿತು ಕಾಲೇಜು ಪ್ರಾಂಶುಪಾಲ ಡಾ. ವಿಷ್ಣುಮೂರ್ತಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: Content is protected !!
Scroll to Top