ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಹಾಗೂ ಯಾವುದೇ ತರಕಾರಿ ಬೇಳೆ ಕಾಳುಗಳ ಜೊತೆ ಅಡುಗೆ ಮಾಡಿದಾಗ ಪದಾರ್ಥದ ರುಚಿಯನ್ನು ಹೆಚ್ಚಿಸುವ ತರಕಾರಿ ಎಂದರೆ ಬಟಾಟೆ. ಬಟಾಟೆಯ ಸೇವನೆಯಿಂದ ಲಾಭದ ಜೊತೆ ನಷ್ಟವು ಕೂಡಿದೆ. ಬಟಾಟೆಯ ಗೆಡ್ಡೆಯಾಗಿದ್ದು ಇದರ ಎಲೆಯನ್ನು ಕೂಡ ಬಳಸಲಾಗುತ್ತದೆ. ಆದರೆ ಇದರ ಪುಷ್ಪವನ್ನು ಉಪಯೋಗಿಸುವುದು ಹಾನಿಕರ. ವಿಶ್ವದಲ್ಲಿ ಎಲ್ಲೆಡೆ ಉಪಯೋಗಿಸುವಂತಹ ಪದಾರ್ಥ ಈ ಬಟಾಟೆ ಇದರ ಬಗ್ಗೆ ತಿಳಿದುಕೊಳ್ಳೋಣ.
ಬಟಾಟೆಯ ಗುಣ ಸ್ವಭಾವ :
ರುಚಿಯಲ್ಲಿ ಮಧುರ ರಸ ಹೊಂದಿದೆ. ಜೀರ್ಣವಾಗಲು ಸಮಯ ಹಿಡಿಯುವ ತರಕಾರಿಯಿದು. ಶುಷ್ಕತೆ ಇದರ ಗುಣ. ಸ್ವಭಾವದಲ್ಲಿ ಶೀತ ವೀರ್ಯ. ವಾತ ಹಾಗೂ ಕಫ ದೋಷವನ್ನು ವೃದ್ಧಿಸುತ್ತದೆ. ಇದರ ಗೆಡ್ಡೆ ಹಾಗೂ ಎಲೆಯನ್ನು ಉಪಯೋಗಿಸುತ್ತಾರೆ.
ಬಟಾಟೆಯ ಉಪಯೋಗಗಳು :
-ಬಟಾಟೆಯು ದೇಹಕ್ಕೆ ಶಕ್ತಿ ನೀಡುತ್ತದೆ.
-ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ.
-ಉರಿತವನ್ನು ಕಡಿಮೆ ಮಾಡುತ್ತದೆ.
-ಹಸಿ ಆಲೂಗಡ್ಡೆಯ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ಮೇಲಿರುವ ಕಪ್ಪು ಕಲೆ ಮಾಯವಾಗುತ್ತದೆ. ಮೊಡವೆಯನ್ನು ಕಡಿಮೆ ಮಾಡುತ್ತದೆ. ತುರಿಕೆ, -ಕಜ್ಜಿಯನ್ನು ನಿವಾರಿಸುತ್ತದೆ.
-ಅಸ್ತಮಾದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯಕ.
-ಕಣ್ಣಿನ ಆರೋಗ್ಯವನ್ನು ರಕ್ಷಿಸುತ್ತದೆ.
ಬಟಾಟೆ ಸೇವಿಸುವಾಗ ಜಾಗರೂಕವಾಗಿರಿ :
ಇದು ಅಜೀರ್ಣಕಾರಕವಾದ್ದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಲ್ಸರ್ ಆಗುವ ಸಂಭವವಿರುತ್ತದೆ. ಅಧಿಕ ಕ್ಯಾಲೋರಿ ಇರುವುದರಿಂದ ಅಧಿಕ ಸೇವನೆ ಹಿತಕರವಲ್ಲ. ಇದು ಮಧುಮೇಹವನ್ನು ಉಂಟುಮಾಡಬಲ್ಲದು. ಬಟಾಟೆಯನ್ನು ಎಣ್ಣೆಯಲ್ಲಿ ಕರೆದು ತಿನ್ನಬಾರದು. ಚಿಪ್ಸ್ ಸೇವಿಸಬಾರದು. ಅದು ದೇಹಕ್ಕೆ ವಿಷಕಾರಕ. ಕ್ಯಾನ್ಸರ್ ಆಗುವ ಸಾಧ್ಯತೆವಿರುತ್ತದೆ. ಅಡುಗೆಯಲ್ಲಿ ಬಳಸುವಾಗ ಬೇಯಿಸಿ ಉಪಯೋಗಿಸಿ. ಬಟಾಟೆಯನ್ನು ಅಗತ್ಯವಿದ್ದಷ್ಟು ಮಾತ್ರ ಸೇವಿಸಿ.