ಕಾರ್ಕಳ : ಲಯನ್ಸ್ ಕ್ಲಬ್ ಬೆಳ್ಮಣ್ ಮತ್ತು ಬೆಳ್ಮಣ್ ಸೆಂಚುರಿ ಆಶ್ರಯದಲ್ಲಿ ಡಾನ್ ಬೊಸಿಯೋ ಕಾನ್ವೆಂಟ್‌ನ ನಿವೃತ್ತ ಶಿಕ್ಷಕಿಯರಾದ ಸಿ. ಮರೀನಾ ಡೆಸೋಜಾ, ಸಿ. ಆಲ್ಬಟಿನ್ ಮಸ್ಕಿನಿಸ್, ಸಿ. ಪೌಲಿನ್ ಅವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಬೆಳ್ಮಣ್ ಅಧ್ಯಕ್ಷ ವಿಶ್ವನಾಥ್ ಪಾಟ್ಕರ್ ಸ್ವಾಗತಿಸಿದರು. ಲಿಡಿಯ ಆರನ ಡಾ| ಎಸ್. ರಾಧಾಕೃಷ್ಣನ್ ವ್ಯಕ್ತಿತ್ವದ ಕುರಿತು ಮತ್ತು ಸನ್ಮಾನಿತರ ಕುರಿತು ಅಭಿನಂದನಾ ಮಾತುಗಳನ್ನು ಆಡಿದರು. ಡಾ| ಎಸ್. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಸಿ. ಮರೀನಾ ಡೆಸೋಜಾ ಕೃತಜ್ಞತೆ ಸಲ್ಲಿಸಿದರು. ಸಂಧ್ಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸೆಂಚುರಿಯ ಅಧ್ಯಕ್ಷ ಸುಜಾನ್ ಕಾಸ್ಟಲಿನೋ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಎರಡು ಕ್ಲಬ್‌ಗಳ ಹಲವಾರು ಸದಸ್ಯರು ಭಾಗವಹಿಸಿದ್ದರು.
ಬೆಳ್ಮಣ್ : ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ
