ದೇಶದ ಹೆಸರು ಭಾರತ್‌ ಎಂದು ಬದಲಾವಣೆ?

ವಿಶೇಷ ಅಧಿವೇಶನದಲ್ಲಿ ಇಂಡಿಯ ಬದಲು ಭಾರತ್‌ ಎಂದು ನಿರ್ಣಯ ಮಂಡನೆ ಸಾಧ್ಯತೆ

ಹೊಸದಿಲ್ಲಿ : I.N.D.I.A ಹೆಸರಿನ ಮೂಲಕ ಭಾವನಾತ್ಮಕವಾಗಿ ಮತಗಳನ್ನು ಸೆಳೆಯುವ ವಿಪಕ್ಷಗಳ ತಂತ್ರಕ್ಕೆ ದೇಶದ ಹೆಸರನ್ನು ಭಾರತ್‌ ಎಂಬುದಾಗಿ ಬದಲಾಯಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಮೂಲವೊಂದು ತಿಳಿಸಿದೆ. ಸೆ.18 ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ಆಡಳಿತ ಪಕ್ಷವಾದ ಬಿಜೆಪಿ ದೇಶಕ್ಕೆ ಇಂಡಿಯಾದಿಂದ ‘ಭಾರತ್’ ಎಂದು ಮರುನಾಮಕರಣ ಮಾಡುವ ನಿರ್ಣಯ ಮಂಡಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಹೊಸ ಸಂಸತ್ ಭವನದಲ್ಲಿ ನಿರ್ಣಯವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟಿರುವುದರಿಂದ ದೇಶದ ಹೆಸರನ್ನು ಭಾರತ್ ಎಂದು ಮರು ನಾಮಕರಣ ಮಾಡಲು ಪ್ರಧಾನಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇಂಡಿಯಾ ಎನ್ನುವುದು ಪರಕೀಯರು ಇಟ್ಟ ಹೆಸರು. ಭಾರತ ಎನ್ನುವುದು ದೇಶದ ಸನಾತನ ಪರಂಪರೆಯಿಂದ ಬಂದ ಹೆಸರು. ಆದರೆ ಹೊರದೇಶಗಳೆಲ್ಲ ದೇಶ ಇಂಡಿಯಾ ಎಂದೇ ಅರಿಯಲ್ಪಡುತ್ತದೆ. ವಿಪಕ್ಷಗಳು ಆ ಹೆಸರನ್ನೇ ಮತಗಳಿಕೆಯ ಅಸ್ತ್ರವಾಗಿಸಿಕೊಳ್ಳಲು ಹೊರಟಿರುವಾಗ ಅದಕ್ಕೆ ತಿರುಗೇಟು ಕೊಡಲು ದೇಶದ ಹೆಸರು ಭಾರತ್‌ ಎಂದು ಬದಲಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ಸಾಧ್ಯವಾದರೆ ಹೆಸರು ಬದಲಾಯಿಸುವ ಬಹುದೊಡ್ಡ ಪ್ರಕ್ರಿಯೆ ನಡೆಸಬೇಕಾಗುತ್ತದೆ, ಎಲ್ಲ ದಾಖಲೆಗಳಲ್ಲಿ ಇಂಡಿಯ ಇರುವಲೆಲ್ಲ ಭಾರತ್‌ ಆಗಬೇಕಾಗುತ್ತದೆ.













































































































































































error: Content is protected !!
Scroll to Top