ಕಾರ್ಕಳ : ಭಾರತ್ ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ ಇಲ್ಲಿನ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್-ಗೈಡ್ ವಿದ್ಯಾರ್ಥಿಗಳು ದಿನಾಂಕ ಶನಿವಾರ ಕಾರ್ಕಳದ ಚೇತನ ವಿಶೇಷ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಹಣ್ಣು ಹಂಪಲು ಮತ್ತು ಸಿಹಿತಿಂಡಿಯನ್ನು ವಿತರಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಮಕ್ಕಳು ಚೇತನ ವಿಶೇಷ ಶಾಲೆಯ ಪ್ರತಿ ವಿಭಾಗದ ಮಕ್ಕಳ ಕಾರ್ಯ ಸಾಧನೆ, ವೈಶಿಷ್ಟ್ಯ, ಪೂರ್ಣವಾದ ಕರಕುಶಲ ವಸ್ತುಗಳ ತಯಾರಿಕಾ ಕೌಶಲವನ್ನು ವೀಕ್ಷಿಸಿದರು. ಅಲ್ಲಿನ ಮಕ್ಕಳ ಮತ್ತು ಅವರ ಕಾರ್ಯಕ್ಷಮತೆಯ ಬಗ್ಗೆ ಪ್ರತಿ ತರಗತಿಯ ಅಧ್ಯಾಪಕರು ಮಕ್ಕಳಿಗೆ ವಿವರಿಸಿದರು. ಮಕ್ಕಳು ತಮ್ಮ ಜೀವನದಲ್ಲಿ ಮಾಡಬೇಕಾದ ಸಾಧನೆಗಳ ಬಗ್ಗೆ ಚಿಂತಿಸುವಂತೆ ಮಾಡಿತು ಈ ಭೇಟಿ. ಖಜಾಂಚಿ ವಿಜಯಕುಮಾರ್ ಮತ್ತು ಮುಖ್ಯಶಿಕ್ಷಕಿ ಹೇಮಲತಾ ಇವರು ಸ್ಕೌಟ್-ಗೈಡ್ಸ್ ಮಕ್ಕಳನ್ನು ಅಭಿನಂದಿಸಿದರು. ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮಾರ್ಗದರ್ಶಕಿ ಮಮತಾ ಗಣೇಶ್ ಮತ್ತು ಶಮ್ಯರವರು ಉಪಸ್ಥಿತರಿದ್ದರು.
ಜೇಸಿಸ್ ಸ್ಕೌಟ್-ಗೈಡ್ ವಿದ್ಯಾರ್ಥಿಗಳು ಚೇತನ ವಿಶೇಷ ಶಾಲೆಗೆ ಭೇಟಿ
