ಸೆ. 9-10 : ಮಾರುತಿ ಫ್ರೆಂಡ್ಸ್‌ ಅನ್ಯಾರ್‌ಕಟ್ಟೆ – 25ನೇ ವರ್ಷದ ಮೊಸರು ಕುಡಿಕೆ ಉತ್ಸವ

ಕಾರ್ಕಳ : ಕೌಡೂರು ಅನ್ಯಾರ್‌ಕಟ್ಟೆಯ ಮಾರುತಿ ಫ್ರೆಂಡ್ಸ್‌ ವತಿಯಿಂದ 25ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ. 9 ಮತ್ತು 10 ರಂದು ನಡೆಯಲಿದೆ.

ಸೆ. 9 ರಂದು ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಗೋಪೂಜೆ, ಮಧ್ಯಾಹ್ನ 2:30ಕ್ಕೆ ಆಟೋಟ ಸ್ಪರ್ಧೆ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದ್ಯಮಿ ಪ್ರಶಾಂತ್‌ ಶೆಟ್ಟಿ ಬೈಲೂರು ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಸುನಿಲ್ ಕುಮಾರ್‌ ಉದ್ಘಾಟಿಸಲಿದ್ದಾರೆ. ರಾತ್ರಿ 8:30 ರಿಂದ ರಂಗ ಕಲಾವಿದರು ರಂಗನಪಲ್ಕೆ ಇವರಿಂದ ದಿನಕರ ಭಂಡಾರಿ ಕಣಜಾರು ರಚಿಸಿ, ನಿರ್ದೇಶಿಸಿರುವ ತುಳು ಹಾಸ್ಯಮಯ ನಾಟಕ ಪಿರಬನ್ನಗ-2 ಪ್ರದರ್ಶನಗೊಳ್ಳಲಿದೆ.

ಸೆ. 10 ರಂದು ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ, 4 ಗಂಟೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಣಿಲ ಶ್ರೀಧಾಮದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. 9 ಗಂಟೆಗೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, 9-30ರಿಂದ ಸಿಂಗಾರ ಕಲಾವಿದೆರ್‌ ಬಜಗೋಳಿ ಇವರಿಂದ ತುಳು ಜನಮದ ಶೈಲಿಯ ನಾಟಕ ನಂಬುಗೆದ ಬೊಲ್ಪು ನಾಟಕ ಪ್ರದರ್ಶನಗೊಳ್ಳಲಿದೆ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.













































































































































































error: Content is protected !!
Scroll to Top