ನಾನು ಸಿದ್ದರಾಮಯ್ಯನವರ ವಕ್ತಾರನಲ್ಲ, ಪಕ್ಕಾ ಕಾಂಗ್ರೆಸ್ಸಿಗ : ಬಿಕೆ ಹರಿಪ್ರಸಾದ್‌

ಕಲಬುರಗಿ : ನಾನು ಸಿದ್ದರಾಮಯ್ಯ ವಕ್ತಾರ ಅಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ ಹೇಳಿದ್ದಾರೆ.
ಸಿದ್ದರಾಮಯ್ಯ ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗ, ಹಿಂದುಳಿದ ಜಾತಿ ನಡುವೆ ಬಹಳ ವ್ಯತ್ಯಾಸ ಇದೆ. ಹಿಂದುಳಿದ ವರ್ಗದ ಬಗ್ಗೆ ಜಾಗೃತಿ ಮೂಡಿಸಿದವರು ದೇವರಾಜ್ ಅರಸು ಅವರು. ಹಿಂದುಳಿದ ವರ್ಗದವರಿಗೆ ಏನಾದರೂ ಮಾಡಿದವರು ಅಂದ್ರೆ ದೇವರಾಜ ಅರಸು ಮತ್ತು ಬಂಗಾರಪ್ಪನವರು. ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ ಎಂದರು.

ನಾನು ಪಕ್ಕಾ ಕಾಂಗ್ರೆಸ್ಸಿಗ
ನಾನು ಪಕ್ಕಾ ಕಾಂಗ್ರೆಸ್‌ ಪಕ್ಷದವನು. ಒಂದೇ ಒಂದು ದಿನ ಬೇರೆ ಪಕ್ಷದ ಕಡೆ ನಾನು ನೋಡಿದವನಲ್ಲ‌. ಮಂತ್ರಿ ಆಗೋದು ನನಗೇನು ದೊಡ್ಡ ವಿಚಾರ ಅಲ್ಲ. ಮಂತ್ರಿ ಆಗೋದು ನನಗೆ ಮುಖ್ಯ ಇಲ್ಲ. ಸಣ್ಣ ಸಣ್ಣ ಸಮುದಾಯಗಳಿಗೂ ರಾಜಕೀಯದಲ್ಲಿ ಅವಕಾಶ ಸಿಗಬೇಕು. ಅದಕ್ಕಾಗಿ ನಾನೂ ರೋಡಿಗಿಳಿದು ಬೇಕಾದರೂ ಹೋರಾಟ ಮಾಡುತ್ತೇನೆ. ಇದನ್ನು ಇಂದಿರಾ ಗಾಂಧಿ ಅವರಿಂದ ಕಲಿಯಬೇಕು ಎಂದು ಸಿದ್ದರಾಮಯ್ಯ ಅವರಿಗೆ ಬಿಕೆ ಹರಿಪ್ರಸಾದ್‌ ಟಾಂಗ್ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಪಕ್ಷದವರಿಂದ ಬಂದವರೂ ಇದ್ದಾರೆ. ಬಿಜೆಪಿಯವರು ಸರಕಾರ ಬೀಳಿಸುತ್ತೇನೆ ಎಂದು ಹೇಳ್ತಿದ್ದಾರೆ, ನೋಡೋಣ ಏನಾಗುತ್ತದೆ. ಆಪರೇಷನ್‌ ಕಮಲದಲ್ಲಿ ಡಾಕ್ಟರೇಟ್‌ ಪಡೆದವರು ಇದ್ದಾರೆ ಎನ್ನುವ ಮೂಲಕ 40-45 ಜನ ಸಂಪರ್ಕದಲ್ಲಿದ್ದಾರೆ, ಒಂದೇ ದಿನದಲ್ಲಿ ಬೇಕಾದ್ರೆ ಸರಕಾರ ಬಿಳಿಸ್ತೇವೆ ಎಂದಿದ್ದ ಬಿಎಲ್‌ ಸಂತೋಷ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಕೇಂದ್ರ ಸರಕಾರದ ನಡೆಗೆ ಕಿಡಿಕಾರಿದ ಬಿಕೆ ಹರಿಪ್ರಾಸದ್
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ. ಒನ್ ನೇಷನ್ ಒನ್ ರೇಷನ್, ಒನ್ ನೇಷನ್ ಒನ್ ಎಜುಕೇಷನ್‌ ಹೀಗೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ. ಕೊನೆಗೆ ಒನ್ ನೇಷನ್ ಒನ್ ಲೀಡರ್ ಅಂದುಬಿಡ್ತಾರೆ ಬಿಜೆಪಿಯವರು. ಒನ್ ನೇಷನ್ ಒನ್ ಎಲೆಕ್ಷನ್ ಈ ದೇಶದಲ್ಲಿ ನಡೆಯುವಂತದ್ದಲ್ಲ ಎಂದು ಕೇಂದ್ರ ಸರ್ಕಾರದ ನಡೆಗೆ ಕಿಡಿಕಾರಿದರು.









































































































































































error: Content is protected !!
Scroll to Top