ಈದು ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ

ಕಾರ್ಕಳ : ಈದು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಥಮ ವಾರ್ಷಿಕ ಸಾಮಾನ್ಯ ಸಭೆ ಆ. 31 ರಂದು ಸಂಘದ ಕಛೇರಿಯಲ್ಲಿ ಜರುಗಿತು. ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಅನಿಲ್ ಕುಮಾರ್ ಶೆಟ್ಟಿ ಮಾತನಾಡಿ, ನಂದಿನಿ ಲವಣ ಮಿಶ್ರಣ ಬಳಕೆ ಹಾಗೂ ಒಕ್ಕೂಟದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ, ಸಂಘದ ಕಾರ್ಯವೈಖರಿಯ ಬಗ್ಗೆ ಹಾಗೂ ಮುಂದಿನ ಯೋಜನೆಗಳ ಕುರಿತು ತಿಳಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಕುಮಾರಿ ಅಶ್ವಿನಿ, ಸಂಘದ ಉಪವಿಧಿಯನ್ನು ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಸುವರ್ಣ ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷ ಹೊನ್ನಯ್ಯ ಶೆಟ್ಟಿ, ನಿರ್ದೇಶಕರಾದ ಅಶೋಕ ಕುಮಾರ್ ಜೈನ್, ಸುರೇಶ ಮಡಿವಾಳ, ಸಂತೋಷ್ ಕುಲಾಲ್ ಬನ್ನಡ್ಕ, ಜಯರಾಮ್ ಎಮ್.ವಿ, ರಮೇಶ ಎಮ್.ಕೆ., ಅರುಣ್ ದೇವಾಡಿಗ, ಲೋಲಾಕ್ಷಿ ಸತೀಶ್ ಪೂಜಾರಿ, ಸುಮನ ಹೆಗ್ಡೆ, ಶಾಂತಿಪ್ರಸಾದ್ ಜೈನ್, ಹರೀಶ್ ಪೂಜಾರಿ ಬಾಕ್ಯರೋಡಿ ಉಪಸ್ಥಿತರಿದ್ದರು. ಸುಮತಿ ಪ್ರಾರ್ಥಿಸಿದರು. ಸಂಘದ ಸದಸ್ಯ ಪ್ರಶಾಂತ ಚಿತ್ತಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬಾಲಗಂಗಾಧರ ಬಿ. ಗೌಡ ವಂದಿಸಿದರು.





























































































































error: Content is protected !!
Scroll to Top