ಹೀತ್‌ ಸ್ಟ್ರೀಕ್‌ ಸಾವಿನ ಸುದ್ದಿ ಸುಳ್ಳು

ಅವರಿನ್ನೂ ಬದುಕಿದ್ದಾರೆ ಎಂದು ಟ್ವೀಟ್‌ ಮಾಡಿದ ಹೆನ್ರಿ ಒಲಾಂಗ

ಹರಾರೆ: ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಆಲ್‌ರೌಂಡರ್ ಹೀತ್ ಸ್ಟ್ರೀಕ್ ನಿಧನರಾಗಿಲ್ಲ ಎಂದು ತಂಡದ ಮಾಜಿ ಆಟಗಾರ ಹೆನ್ರಿ ಒಲಾಂಗ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಗ್ಗಿನಿಂದ ಹೀತ್‌ ಸ್ಟ್ರೀಕ್‌ ನಿಧನರಾಗಿದ್ದಾರೆ ಎಂಬ ಸುದ್ದಿ ಹರಡಿ ಕ್ರಿಕೆಟ್‌ ಜಗತ್ತು ಮತ್ತು ಕ್ರಿಕೆಟ್‌ ಪ್ರೇಮಿಗಳು ದುಃಖದಲ್ಲಿ ಮುಳುಗಿದ್ದರು. ಅನೇಕ ಮಂದಿ ಟ್ವಿಟ್ಟರ್‌ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಿಯೂ ಆಗಿತ್ತು. ಈ ನಡುವೆ ಹೆನ್ರಿ ಒಲಾಂಗ ಇನ್ನೊಂದು ಟ್ವೀಟ್‌ ಮಾಡಿ ಹೀತ್‌ ಸ್ಟ್ರೀಕ್‌ ಬದುಕಿದ್ದಾರೆ, ಸಾವಿನ ಸುದ್ದಿಯನ್ನು ನಂಬಬೇಡಿ ಎಂದಿದ್ದಾರೆ.
ಹೀತ್‌ ಸ್ಟ್ರೀಕ್‌ ನಿಧನರಾಗಿರುವ ಕುರಿತುಮೊದಲು ಟ್ವೀಟ್‌ ಮಾಡಿ ತಿಳಿಸಿದ್ದು ಕೂಡ ಹೆನ್ರಿ ಒಲಾಂಗ ಅವರೇ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ 49 ವರ್ಷದ ಜಿಂಬಾಬ್ವೆ ಲೆಜೆಂಡ್ ಇನ್ನಿಲ್ಲ ಎಂದು ಅವರು ಟ್ವೀಟ್‌ ಮಾಡಿದ್ದರು. ಆದರೆ ಇದೀಗ ಈ ಸುದ್ದಿ ಸುಳ್ಳು ಎಂದು ಜಿಂಬಾಬ್ವೆಯ ಹೆನ್ರಿ ಒಲಾಂಗ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಸ್ಪಷ್ಟನೆ ನೀಡಿರುವ ಹೆನ್ರಿ ಒಲಾಂಗ, “ಹೀತ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಉತ್ಪ್ರೇಕ್ಷಿತವಾಗಿವೆ ಎಂದು ನಾನು ದೃಢೀಕರಿಸಬಲ್ಲೆ. ಮೂರನೇ ಅಂಪೈರ್ ಅವರನ್ನು ವಾಪಸ್ ಕರೆದಿದ್ದಾರೆ. ಅವರು ಜೀವಂತವಾಗಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಹೆನ್ರಿ ಒಲಾಂಗ ಅವರು ಅದಕ್ಕೂ ಮೊದಲು ಹೀತ್ ಸ್ಟ್ರೀಕ್ ಅವರ ನಿಧನದ ಸುದ್ದಿಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. “ಹೀತ್ ಸ್ಟ್ರೀಕ್ ಅವರು ಮತ್ತೊಂದು ಲೋಕಕ್ಕೆ ಹೋದರು ಎಂಬ ದುಃಖದ ಸುದ್ದಿ ಬರುತ್ತಿದೆ. ಜಿಂಬಾಬ್ವೆ ಕ್ರಿಕೆಟ್ ದಂತಕಥೆಗೆ ಶಾಂತಿ ಸಿಗಲಿ” ಎಂದು ಬರೆದಿದ್ದರು. ಆದರೆ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.





























































































































error: Content is protected !!
Scroll to Top