ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಸ್ವಿಟಿ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಕುಸ್ತಿ ಪಂದ್ಯಾಟದಲ್ಲಿ ಕ್ರೈಸ್ಟ್ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹತ್ತು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಸಾಕ್ಷಿತ್ ಪಿ. ಜೈನ್, ಆಯುಶ್ರೀ ಎಂ. ಆಚಾರ್ಯ, ಫಿಯೋನಾ ಡಿಸೋಜ, ಸಾನ್ವಿ ನಾಯಕ್ (6ನೇ ತರಗತಿ), ಬಿಲಾಲ್ ಶೇಖ್ (7ನೇ ತರಗತಿ), ರೇಚಲ್ ಡಿಸೋಜ (8ನೇ ತರಗತಿ), ನೇಹಾ ವಿ., ದಿಶಾ ಡಿಮೆಲ್ಲೊ, ರವೀನಾ ಕನ್ವರ್, ಡೆನಿಕಾ ಶೆನನ್ ಕುಂದರ್ (10ನೇ ತರಗತಿ) ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ಪಂದ್ಯಾಟದಲ್ಲಿ ವಿದ್ಯಾರ್ಥಿಗಳಾದ ಕೆವಿನ್ ದಾಂತಿ, ಆರ್ಯನ್ ಶೆಟ್ಟಿ, ಸಾನ್ವಿ ಶೆಟ್ಟಿ, ರಿತು ಫ್ರಾನ್ಸಿಸ್, ಡೇನಿಯಲ್ ಸಾಲ್ಡಾನ್ಹ (6ನೇ ತರಗತಿ) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಲಾವಣ್ಯ ಶೆಟ್ಟಿ, ಪ್ರಕಾಶ್ ನಾಯ್ಕ್ ಹಾಗೂ ಕೃಷ್ಣ ಪ್ರಸಾದ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.
ಕುಸ್ತಿ ಪಂದ್ಯಾಟ : ಕ್ರೈಸ್ಟ್ಕಿಂಗ್ನ 10 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ






























































