ಪ್ರಪಾತಕ್ಕೆ ಉರುಳಿದ ಸೇನಾ ವಾಹನ : 9 ಯೋಧರ ದುರ್ಮರಣ

ಲಡಾಖ್ : ಸೇನಾ ವಾಹನ ಆಳವಾದ ಪ್ರಪಾತಕ್ಕೆ ಉರುಳಿ ಬಿದ್ದು 9 ಯೋಧರು ಮೃತಪಟ್ಟು ಒಬ್ಬರು ಗಾಯಗೊಂಡ ದುರಂತ ಘಟನೆ ಶನಿವಾರ ಲಡಾಖ್‌ನಲ್ಲಿ ಸಂಭವಿಸಿದೆ.
ಲಡಾಖ್‌ನ ಕ್ಯಾರಿ ಪಟ್ಟಣದ ಸಮೀಪ ಅಪಘಾತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿ ಕೂಡ ಸೇರಿದ್ದಾರೆ. ಯೋಧರು ಕಾರು ಗ್ಯಾರಿಸನ್‌ನಿಂದ ಲೇಹ್ ಬಳಿಯ ಕ್ಯಾರಿಗೆ ತೆರಳುತ್ತಿದ್ದರು ಎಂದು ಲಡಾಖ್‌ನ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತುರ್ತು ನಿಗಾ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ.







































































error: Content is protected !!
Scroll to Top