ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ – ಪುತ್ತಿಲ ಪರಿವಾರದಿಂದ ಪ್ರತಿಭಟನೆ

ಮರುತನಿಖೆಯಾಗದಿದ್ದಲ್ಲಿ ಹೋರಾಟದ ಕಾವು ಸಂಘರ್ಷದ ಹಾದಿ ಹಿಡಿಯಲಿದೆ – ಅರುಣ್‌ ಪುತ್ತಿಲ

ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರುತನಿಖೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಹೋರಾಟ ಸಂಘರ್ಷದ ಹಾದಿ ಹಿಡಿಯಲಿದೆ ಎಂದು ಹಿಂದೂ ಸಂಘಟನೆಗಳ ಮುಖಂಡ ಅರುಣ್‌ ಪುತ್ತಿಲ ಎಚ್ಚರಿಕೆ ನೀಡಿದರು. ಅವರು ಆ. 14 ರಂದು ಪುತ್ತಿಲ ಪರಿವಾರದಿಂದ ನಮ್ಮ ನಡೆ ನ್ಯಾಯದ ಕಡೆ ಎಂದು ದರ್ಬೆ ವೃತ್ತದಿಂದ ಪುತ್ತೂರು ಬಸ್ ನಿಲ್ದಾಣದ ವರೆಗೆ ನಡೆದ ಪಾದಯಾತ್ರೆಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಬೇಳೆ ಬೇಯಿಸುವುದನ್ನು ನಿಲ್ಲಿಸಲಿ
ಸೌಜನ್ಯ ಹೆಸರಿನಲ್ಲಿ ಬೇಳೆ ಬೇಯಿಸುವ ಕೆಲಸವನ್ನು ಸರಕಾರ ನಿಲ್ಲಿಸಬೇಕು. ಇಲ್ಲದೆ ಹೋದಲ್ಲಿ ಸೌಜನ್ಯ ಹೆಸರಿನಲ್ಲಿ ಸರಕಾರ ಪಥನ ಆಗೋದು ನಿಶ್ಚಿತ. ಕೊಲೆಗಾರನನ್ನ ಗಲ್ಲುಗೇರಿಸಿಯೇ ಸಿದ್ಧ ಎಂದು ಶಪಥ ಮಾಡಿದರು.

ಮೂವರು ಅಧಿಕಾರಿಗಳ ತನಿಖೆಯಾಗಬೇಕು
ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಮೂವರು ಪೊಲೀಸ್ ಅಧಿಕಾರಿಗಳ ಎಸ್ಐಟಿ ತನಿಖೆ ಆಗಬೇಕು. ಆಗ ಮಾತ್ರ ಕೊಲೆಯ ನೈಜ್ಯ ಮಾಹಿತಿ ಸಿಗಲಿದೆ ಎಂದರು.

ಕಾಲ್ನಡಿಗೆ ಜಾಥಾದಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪುತ್ತೂರಿನ ಬಸ್ ನಿಲ್ದಾಣದ ಬಳಿ ರಸ್ತೆ ತಡೆದು ಪುತ್ತಿಲ ಪರಿವಾರದವರಿಂದ ಪ್ರತಿಭಟನೆ ನಡೆಯಿತು.















































































error: Content is protected !!
Scroll to Top