ಬಡ ವಿದ್ಯಾರ್ಥಿಗಳಿಗೆ ಆಸರೆಯಿಂದ ಸಮಾಜಮುಖಿ ಕಾರ್ಯ ಅರ್ಥಪೂರ್ಣ : ಪ್ರಭಾಕರ್ ಕುಲಾಲ್‌

ನಾನಿಲ್ತಾರ್ ಕುಲಾಲ ಸಂಘದ ಪ್ರತಿಭಾ ಪುರಸ್ಕಾರ, ಸನ್ಮಾನ, ಆಟಿಡೊಂಜಿ ಕೂಟ

ಕಾರ್ಕಳ : ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಅದಕ್ಕೆ ಬೇಕಾದ ಪೂರಕ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಸರೆ ನೀಡಿದರೆ ಸಂಘದ ಸಮಾಜಮುಖಿ ಕಾರ್ಯಗಳು ಅರ್ಥಪೂರ್ಣವಾಗಬಹುದು ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್‌ ಹೇಳಿದರು.
ಕುಲಾಲ ಸಂಘ ನಾನಿಲ್ತಾರ್ ವತಿಯಿಂದ ಪ್ರತಿಭಾ ಪುರಸ್ಕಾರ, ಸನ್ಮಾನ, ಆಟಿಡೊಂಜಿ ಕೂಟ ಉದ್ಘಾಟಿಸಿ ಮಾತನಾಡಿದರು. ಸಂಘದ ವಿದ್ಯಾಸಿರಿ ಯೋಜನೆಗೆ ಪ್ರಥಮ ದೇಣಿಗೆಯನ್ನು ಈ ಸಂದರ್ಭದಲ್ಲಿ ಘೋಷಿಸಿದರು.
ಸಂಘದ ಅಧ್ಯಕ್ಷ ಕುಶ ಆರ್. ಮೂಲ್ಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ನಿವೃತ್ತ ಯೋಧ ಜಯ ಮೂಲ್ಯ ಕಾರ್ಕಳ ದಂಪತಿಯನ್ನು ಸನ್ಮಾನಿಸಲಾಯಿತು. ಸಂಗೀತಾ ಕುಲಾಲ್ ಬೋಳ ಅಭಿನಂದನಾ ಮಾತುಗಳನ್ನಡಿದರು ಉದ್ಯಮಿ ಅಶೋಕ್ ಕುಲಾಲ್ ಮಂಗಳೂರು, ತೋಕುರು ಕುಲಾಲ ಸಂಘದ ಅಧ್ಯಕ್ಷ ಶ್ರೀಧರ್ ಬಂಗೇರ, ಬೋಳ ಕುಲಾಲ್ ಸಂಘದ ಅಧ್ಯಕ್ಷ ಗಣೇಶ್ ಕುಲಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 80ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಮಾಜಿ ಅಧ್ಯಕ್ಷ ಮಂಜಪ್ಪ ಮೂಲ್ಯ, ಕಾರ್ಯದರ್ಶಿ ಆಶಾ ವರದರಾಜ್, ಕೋಶಾಧಿಕಾರಿ ಸುಧಾಕರ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ ಶ್ರೀಧರ್, ಯುವ ವೇದಿಕೆ ಅಧ್ಯಕ್ಷ ದೀಪಕ್ ಬೆಳ್ಮಣ್ ಮೂದಲಾದವರು ಉಪಸ್ಥಿತರಿದ್ದರು.ಹರ್ಷಿತಾ ಮತ್ತು ಶಿಕ್ಷಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಕುಲಾಲ್ ವಂದಿಸಿದರು. ಬೊಗ್ಗು ಮೂಲ್ಯ ಬೇಲಾಡಿ, ಜಗನ್ನಾಥ ಮೂಲ್ಯ ಬೆಳ್ಮಣ್, ಸಾಂತೂರ್ ರಾಜೇಶ್ ಕುಲಾಲ್, ಲೋಕೇಶ್ ಕುಲಾಲ್, ಸಂತೋಷ್‌ ಕುಲಾಲ್ ಅಗರಟ್ಟ, ಪವಿತ್ರ ಅಶೋಕ್ ಕುಲಾಲ್, ಸುಧಾಕರ್ ಸಾಲಿಯಾನ್ ಚೈತ್ರೇಶ್, ಅರುಣಾ ಕುಲಾಲ್ ಸಹಕರಿಸಿದರು.







































































































































error: Content is protected !!
Scroll to Top